ಬಳ್ಳಾರಿ : ಬೆಂಗಳೂರಿನಿಂದ ಸಿರಗುಪ್ಪಕ್ಕೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ರೈಲ್ವೇ ಟ್ರಾಕ್ ಬಳಿ ಬಿದ್ದಿದೆ. ಲಾರಿಯೊಂದು ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ವೇಗವಾಗಿ ಹೋದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿರೋ ಘಟನೆ ಬಳ್ಳಾರಿ ತಾಲೂಕಿನ ಹಲಕುಂದಿ ಬೈಪಾಸ್ ಬಳಿ ನಡೆದಿದೆ.
ಬಸ್ ನಲ್ಲಿ ಮೂವತ್ತಕ್ಕೂ ಹೆಚ್ಚು ಜನರು ಪ್ರಯಾಣ ಮಾಡುತ್ತಿದ್ದು ಮೂವರಿಗೆ ಮಾತ್ರ ಸ್ವಲ್ಪ ಗಾಯವಾಗಿದ್ದು ಉಳಿದವರಿಗೆ ಯಾವುದೇ ರೀತಿಯ ದೊಡ್ಡ ಮಟ್ಟದ ಗಾಯವಾಗಿಲ್ಲ. ಅದೃಷ್ಟ ಎನ್ನುವಂತೆ ಬಸ್ ನಿಧಾನವಾಗಿದ್ದ ಪರಿಣಾಮ ಒಂದೇ ಕಡೆ ವಾಲಿ ಒಂದೇ ಪಲ್ಟಿಗೆ ಬಸ್ ನಿಂತಿದೆ.
ಇದನ್ನೂ ಓದಿ : ಕುಡಿದ ನೆಶೆಯಲ್ಲಿ ರೈಲ್ವೇ ಫ್ಲಾಟ್ಪಾರ್ಮ್ಗೆ ಕಾರು ನುಗ್ಗಿಸಿದ ಭೂಪ
ಒಂದು ವೇಳೆ ಎರಡು ಮೂರು ಪಲ್ಟಿಯಾಗಿದ್ರೇ ದೊಡ್ಡ ಮಟ್ಟದಲ್ಲಿ ಅನಾಹುತವಾಗುತ್ತಿತ್ತು ಎಂದು ಬಸ್ ನಲ್ಲಿದ್ದ ಪ್ರಯಾಣಿಕರು ತಿಳಿಸಿದ್ದಾರೆ. ಸ್ಥಳಕ್ಕೆ ಬಳ್ಳಾರಿ ಟ್ರಾಫಿಕ್ ಮತ್ತು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


