Site icon PowerTV

ಶಿವಲಿಂಗದ ಮೇಲೆ ಕಾಲಿಟ್ಟು ರೀಲ್ಸ್​ ಮಾಡಿದ್ದ ಅನ್ಯಧರ್ಮಿ ಯುವಕನಿಗೆ ಥಳಿಸಿದ ಸಾರ್ವಜನಿಕರು ​

ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ಶಿವಲಿಂಗದ ಮೇಲೆ ಕಾಲಿಟ್ಟು ವಿಡಿಯೋ ಮಾಡಿದ್ದ ಅನ್ಯಧರ್ಮಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಬಂಧಿತನನ್ನು ವೈದ್ಯಕೀಯ ಪರೀಕ್ಷೆಗೆ ಎಂದು ಕರೆದೊಯ್ಯುವ ವೇಳೆ ನೆರೆದಿದ್ದ ಜನರು ಆತನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ.

ಇತ್ತೀಚೆಗೆ ಮಧ್ಯಪ್ರದೇಶದ ಇಮ್ರಾನ್​ ಸುಖಾ ಎಂಬ ಯುವಕನೊರ್ವ ಶಿವಲಿಂಗದ ಮೇಲೆ ಕಾಲಿಟ್ಟು ವಿಡಿಯೋ ಮಾಡಿದ್ದನು. ಈ ವಿಡಿಯೋವನ್ನು ಚಿತ್ರಕರಿಸಿ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋವನ್ನು ಜನವರಿ 29ರಂದು ಶೇರ್​ ಮಾಡಿಕೊಂಡಿದ್ದನು.

ಇದನ್ನೂ ಓದಿ : ಕುಂಭಮೇಳದ ಫೇಕ್​ ಪೋಟೊ ಶೇರ್​ ಮಾಡಿದ್ದ ಸಂಬರ್ಗಿ ವಿರುದ್ದ ದೂರು ದಾಖಲಿಸಿದ ಪ್ರಕಾಶ್​ ರೈ

ಈ ವಿಡಿಯೋ ಹಿಂದೂ ಸಮುದಾಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು, ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸದಸ್ಯರು ರತ್ಲಂನ ಸ್ಟೇಷನ್ ರಸ್ತೆ ಪೊಲೀಸ್ ಠಾಣೆಗೆ ರೀಲ್‌ನ ಸ್ಕ್ರೀನ್‌ಶಾಟ್​ಗಳನ್ನು ನೀಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು ಹಾಗೂ ಆರೋಪಿಯೂ ಉದ್ದೇಶ ಪೂರ್ವಕವಾಗಿ ಈ ಕೆಲಸ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು.

ಕೃತ್ಯದ ಬಗ್ಗೆ ಜನರಿಂದ ಆಕ್ರೋಶಗಳು ಹೆಚ್ಚಾದ ಹಿನ್ನಲೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದು. ವೈದ್ಯಕೀಯ ತಪಾಸಣೆ ಎಂದು ಕರೆದೊಯ್ಯುವ ವೇಳೆ ಆರೋಪಿಗೆ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.  ಇಮ್ರಾನ್ ಈ ಹಿಂದೆ ಕೂಡ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದ. ಈ ಘಟನೆಗೆ ಕೆಲವೇ ದಿನಗಳ ಮೊದಲು ಇಮ್ರಾನ್ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version