Site icon PowerTV

ಕಸಾಯಿಖಾನೆ ಮೇಲೆ ಹಿಂದೂಪರ ಸಂಘಟನೆ ದಾಳಿ: ಎಂಟು ಹಸುಗಳ ಕಟಾವು, 6 ಹಸುಗಳ ರಕ್ಷಣೆ !

ದೇವನಹಳ್ಳಿ : ಕಸಾಯಖಾನೆ ಮೇಲೆ ಹಿಂದೂಪರ ಸಂಘಟನೆಗಳು ದಾಳಿ ನಡೆಸಿದ್ದು. ಪುನೀತ್​ ಕೆರೆಹಳ್ಳಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ 6 ಹಸುಗಳನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ಹೊಸಕೋಟೆ ನಗರದಲ್ಲಿರುವ ಕಸಾಯಿಖಾನೆ ಮೇಲೆ ಪುನೀತ್ ಕೆರೆಹಳ್ಳಿ ನೇತೃತ್ವದ ಹಿಂದೂಪರ ಸಂಘಟನೆ ದಾಳಿ ನಡೆಸಿದ್ದು. ರಾತ್ರಿ 1:30ರ ಸಮಯಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ 8ಕ್ಕೂ ಹೆಚ್ಚು ಹಸುಗಳನ್ನು ಕಟಾವು ಮಾಡಿದ್ದರು ಎಂದು ತಿಳಿದು ಬಂದಿದ್ದು.  6 ಹಸುಗಳನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: ಪಾಪ ಕಳೆದುಕೊಳ್ಳಲು ಪ್ರಯಾಗ್​ ಕುಂಭಮೇಳಕ್ಕೆ ಭೇಟಿ ನೀಡಿದ ಪವಿತ್ರಾ

ಘಟನ ಸ್ಥಳಕ್ಕೆ ಹೊಸಕೋಟೆ ಡಿವೈಎಸ್ಪಿ ಅಣ್ಣ ಸಾಹೇಬ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಕಟಾವು ಮಾಡಿದ್ದ ಗೋಮಾಂಸವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

Exit mobile version