Site icon PowerTV

ಪಾಪ ಕಳೆದುಕೊಳ್ಳಲು ಪ್ರಯಾಗ್​ ಕುಂಭಮೇಳಕ್ಕೆ ಭೇಟಿ ನೀಡಿದ ಪವಿತ್ರಾ

ಪ್ರಯಾಗ್‌ರಾಜ್: ಉತ್ತರಪ್ರದೇಶನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಭೇಟಿ ನೀಡಿದ್ದು, ಪವಿತ್ರ ಸಂಗಮದಲ್ಲಿ ಶಾಹಿ ಸ್ನಾನ ಮಾಡಿದ್ದಾರೆ ಎಂದು ತಿಳಿದುಬ ಬಂದಿದೆ. ಈ ಕುರಿತಾದ ವಿಡಿಯೋವನ್ನು ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮೌನಿ ಅಮಾವಾಸ್ಯಯಂದು ಶಾಹಿ ಸ್ನಾನದ ಪುಣ್ಯ ಸಿಕ್ಕು ನಾನೇ ಧನ್ಯಾಳು’. ನಾನು ಎಲ್ಲಾ ನಕಾರಾತ್ಮಕ ಶಕ್ತಿಯಿಂದ ಮುಕ್ತಳಾಗಿದ್ದೇನೆ ಎಂದು ನಂಬಿದ್ದೇನೆ. ಹರಹರ ಮಹಾದೇವ ಎಂದು ನಟಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ :ಸಿಲಿಂಡರ್​ ಸ್ಪೋಟ, ನಡು ರಸ್ತೆಯಲ್ಲಿ ಛಿದ್ರವಾದ ಟ್ರಕ್​ !

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದಿರುವ ನಟಿ ಪವಿತ್ರಾ ಕಳೆದ ಕೆಲ ದಿನಗಳಿಂದ ಟೆಂಪಲ್​ ನಡೆಸುತ್ತದ್ದಾರೆ. ಮತ್ತೊಂದಡೆ ಪೊಲೀಸರು ಕೊಲೆ ಆರೋಪಿಗಳ ಬೇಲ್​ ರದ್ದುಗೊಳಿಸಬೇಕು ಎಂದು ಸುಪ್ರೀಂ ಕದ ತಟ್ಟಿದ್ದಾರೆ.

Exit mobile version