Site icon PowerTV

ಚಿನ್ನದ ನಾಣ್ಯ ಮಾರಾಟ ಮಾಡಿ ವಂಚಿಸಿದ್ದ ಖದೀಮನ ಹೆಡೆಮುರಿ ಕಟ್ಟಿದ ಪೊಲೀಸರು

ಶಿವಮೊಗ್ಗ : ಹಾಸನ ಜಿಲ್ಲೆಯ ವ್ಯಕ್ತಿಯೋರ್ವರಿಗೆ, ಅಸಲಿ ಬಂಗಾರದ ನಾಣ್ಯಗಳು ಎಂದು ನಂಬಿಸಿ ನಕಲಿ ಬಂಗಾರ ನೀಡಿ ಲಕ್ಷಾಂತರ ರೂ. ವಂಚಿಸಿ ಪರಾರಿಯಾಗಿದ್ದ ಸೊರಬ ತಾಲೂಕಿನ ಆರೋಪಿಯೋರ್ವನನ್ನು ಶಿರಾಳಕೊಪ್ಪ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ತತ್ತೂರು ಗ್ರಾಮದ ನಿವಾಸಿ ಚಂದ್ರಪ್ಪ (68) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯಿಂದ 5 ಲಕ್ಷ ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಾಸನ ಜಿಲ್ಲೆಯ ಇಂಟಿತೊಳಲು ಗ್ರಾಮದ ಕಲ್ಲೇಶ್,ಎಂಬುವವರಿಗೆ ಧರ್ಮಸ್ಥಳದಲ್ಲಿ ಚಂದ್ರು ಎಂಬ ವ್ಯಕ್ತಿಯ ಪರಿಚಯವಾಗಿದ್ದು, ಈತ ಕಲ್ಲೇಶ್ ರಿಗೆ ಫೋನ್ ಮಾಡಿ, ನಮ್ಮ ಮನೆಯ ಪಕ್ಕದ ಜಾಗದಲ್ಲಿ ಪಾಯ ತೆಗೆಯುವಾಗ 3 ಕೆ.ಜಿ. ಬಂಗಾರದ ನಾಣ್ಯಗಳು ಸಿಕ್ಕಿದೆ. ಅವುಗಳನ್ನು ಮಾರಾಟ ಮಾಡುತ್ತೇವೆಂದು ಹೇಳಿದ್ದನಂತೆ.

ಇದನ್ನೂ ಓದಿ :ಮೃತ ಮಂಜಮ್ಮ ಕುಟುಂಬಕ್ಕೆ ಧನ ಸಹಾಯ ಮಾಡಿದ ಡ್ರೋನ್​ ಪ್ರತಾಪ್​ !

ಈತನ ಮಾತು ನಂಬಿ ಕಲ್ಲೇಶನು ಚಂದ್ರು ಮತ್ತು ನವೀನ್ ಇಬ್ಬರಿಗೆ 5 ಲಕ್ಷ ರೂ. ಹಣ ನೀಡಿ ಅವರಿಂದ 800 ಗ್ರಾಂ ತೂಕದ ನಾಣ್ಯಗಳನ್ನು ಪಡೆದು ಹೋಗಿ ಪರೀಕ್ಷೆ ಮಾಡಿಸಿದಾಗ ಇವು ನಕಲಿ ಬಂಗಾರದ ನಾಣ್ಯಗಳೆಂದು ತಿಳಿದು ಬಂದಿರುತ್ತದೆ. ತನಗೆ ಬಂಗಾರದ ನಾಣ್ಯಗಳೆಂದು ಹೇಳಿ ನಕಲಿ ನಾಣ್ಯಗಳನ್ನು ನೀಡಿ ಹಣವನ್ನು ಪಡೆದು ಮೋಸ ಮಾಡಿದ್ದ ಇಬ್ಬರ ವಿರುದ್ಧ ಕಲ್ಲೇಶ್ ದೂರು ದಾಖಲಿಸಿದ್ದರು.

ಶಿಕಾರಿಪುರ ಡಿವೈಎಸ್ಪಿ ಕೇಶವ್ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್’ಪೆಕ್ಟರ್ ರುದ್ರೇಶ್ ಮೇಲ್ವಿಚಾರಣೆಯಲ್ಲಿ ಸಬ್ ಇನ್ಸ್​ಪೆಕ್ಟರ್ ಪ್ರಶಾಂತ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಂತೋಷ್ ಕುಮಾರ್, ಸಲ್ಮಾನ್, ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

Exit mobile version