Site icon PowerTV

ಚೀಟಿ ಹಾಕಿದ್ದ ಜನರಿಗೆ ಉಂಡೆನಾಮ: 30 ಕೋಟಿ ಹಣದೊಂದಿಗೆ ಪರಾರಿಯಾದ ಶಿವಾನಂದ

ತುಮಕೂರು: ಮನೆಯಲ್ಲಿ ಹಣವನ್ನು ಇಟ್ಟರೆ ಯಾವುದೇ ಪ್ರಯೋಜನವಿಲ್ಲ ಎಂದು ಜನರು ಹಣವನ್ನು ಬೇರೆ ಕಡೆ ಹೂಡಿಕೆ ಮಾಡುವುದು ಸಾಮಾನ್ಯ. ಕೆಲವರು ಶೇರ್​ ಮಾರ್ಕೇಟ್​ನಲ್ಲಿ ಹೂಡಿಕೆ ಮಾಡಿದರೆ, ಇನ್ನು ಕೆಲವರು ಚೀಟಿಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ಖದೀಮ ಜನರಿಂದ ಹಣವನ್ನು ಕಟ್ಟಿಸಿಕೊಂಡು ಅಷ್ಟು ಹಣದ ಜೊತೆಗೆ ಮಂಗಮಾಯವಾಗಿದ್ದಾನೆ.

ಹೆಚ್ಚು ಬಡ್ಡಿ ದುಡ್ಡು ಕೊಡ್ತೀವಿ ಅಂತೇಳಿ ನೂರಾರು ಜನರಿಗೆ ಉಂಡೇ ನಾಮ ಹಾಕಿ ಕೋಟ್ಯಾಂತರ ರೂಪಾಯಿ ದೋಚಿ ಜ್ಯೂವೆಲರಿ ಶಾಪ್ ಮಾಲೀಕ ಪರಾರಿಯಾಗಿದ್ದಾನೆ. ಹೌದು ನಗರದ ಪ್ರತಿಷ್ಠಿತ ಜ್ಯೂವೆಲ್ಲರಿ ಶಾಪ್​ಗಳಲ್ಲಿ ಒಂದಾಗಿರೋ ಆಕಾಶ ಜ್ಯೂವೆಲರಿ ಶಾಪ್ ಮಾಲೀಕ ಶಿವಾನಂದ ಮೂರ್ತಿ ನೂರಾರು ಮಂದಿಗೆ ವಂಚಿಸಿ ಕುಟುಂಬ ಸಮೇತ ಎಸ್ಕೇಪ್ ಆಗಿದ್ದಾನೆ.

ಇದನ್ನೂ ಓದಿ :ಬಸ್​ ಮುಂಭಾಗದ ಗಾಜು ಒಡೆದು ಪುಂಡಾಟ ಮೆರೆದಿದ್ದ ಪುಡಿರೌಡಿ ಕಾಲಿಗೆ ಗುಂಡೇಟು

ನಗರದ ಸರ್ಕಾರಿ ಬಸ್​ ನಿಲ್ದಾಣದ ಎದುರಿನಲ್ಲಿರುವ ಕಾಂಪ್ಲೇಕ್ಸ್​ನಲ್ಲಿ ಶಿವನಂದ ಮೂರ್ತಿ ಜ್ಯೂವೆಲರಿ ಶಾಪ್​ ನಡೆಸುತ್ತಿದ್ದ. ದುಪ್ಪಟ್ಟು ಬಡ್ಡಿ ನೀಡುತ್ತೇನೆ ಎಂದು ಶಿವಾನಂದ ಸೌರ್ಹಾದ ಕೋಪರೇಟಿವ್​ ಸೊಸೈಟಿ ಮೂಲಕ ಜನರ ಜೊತೆ ಚೀಟಿ ವ್ಯವಹಾರ ನಡೆಸುತ್ತಿದ್ದ. ಆದರೆ ಈತ ಕಳೆದ 20 ದಿನಗಳಿಂದ ನಾಪತ್ತೆಯಾಗಿದ್ದ. ಅನುಮಾನ ಬಂದ ಜನರು ವಿಚಾರಿಸಿದಾಗ ಶಿವಾನಂದ ತನ್ನ ಹೆಂಡತಿ ಪೂರ್ಣಿಮಾ ಮತ್ತು ಮಗ ಆಕಾಶ್​ ಜೊತೆ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈತನ ಮಗ ನಾರಾಯನ ಹೃದಯಾಲಯದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ತುಮಕೂರು ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಜ್ಯೂವೆಲರಿ ಶಾಪ್​ ಮಾಲೀಕನ ವಿರುದ್ದ  ಪ್ರಕರಣ ದಾಖಲಾಗಿದ್ದು. ಆರೋಪಿಗಳಿಗೆ ಹುಡುಕಾಟ ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ.

Exit mobile version