Site icon PowerTV

ಪ್ರಿಯತಮೆಯ ಕತ್ತು ಕೊಯ್ದು ಬರ್ಬರವಾಗಿ ಕೊ*ಲೆ ಮಾಡಿದ ಪ್ರಿಯಕರ

ರಾಯಚೂರು : ಪಾಗಲ್​ ಪ್ರೇಮಿಯೊಬ್ಬ ಪ್ರಿಯತಮೆಯ ಕತ್ತುಕೊಯ್ದು ಕೊಲೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದ್ದು. ಕೊಲೆಯಾದ ದುರ್ದೈವಿಯನ್ನು 23 ವರ್ಷದ ಶಿಫಾ ಎಂದು ಗುರುತಿಸಲಾಗಿದ್ದು. ಕೊಲೆ ಮಾಡಿದ ಯುವಕನನ್ನು ಮೊಬಿನ್​ ಎಂದು ಗುರುತಿಸಲಾಗಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಹೊರವಲಯದಲ್ಲಿ ಘಟನೆ ನಡೆದಿದ್ದು. ಲಿಂಗಸಗೂರು ಮೂಲದ ಶಿಫಾ ಸಿಂಧನೂರಿನಲ್ಲಿರುವ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಎಂಎಸ್ಸಿ ಮ್ಯಾಥಮೆಟಿಕ್ಸ್​ ಓದುತ್ತಿದ್ದಳು. ಎಂದಿನಂತೆ ಯುವತಿ ಶಿಫಾ ಇಂದು ಮನೆಯಿಂದ ಹೊರಟು ಕಾಲೇಜಿಗೆ ಎಂದು ಹೋಗುತ್ತಿದ್ದಳು. ಈ ವೇಳೆ ಮಾರ್ಗ ಮಧ್ಯದಲ್ಲಿ ಎಂಟ್ರಿ ಕೊಟ್ಟ ಪಾಗಲ್​ ಪ್ರೇಮಿ ಯುವತಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ :ಲಕ್ಷ್ಮೀ ಹೆಬ್ಬಾಳ್ಕರ್​ಗೆ ಪ್ರಾಸ್ಟಿಟ್ಯೂಟ್​ ಪದ ಬಳಕೆ ವಿಚಾರ: ಸಿ.ಟಿ ರವಿ ಹೈಕೋರ್ಟ್ ಬಿಗ್​ ರಿಲೀಫ್​ !

ಕೊಲೆ ಮಾಡಿದ ಆರೋಪಿ ಮೊಬಿನ್​ ನೇರವಾಗಿ ಸಿಂದನೂರು ಪೊಲೀಸ್​ ಠಾಣೆಗೆ  ಹೋಗಿ ಶರಣಾಗಿದ್ದು. ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ವೇಳೆ ಯುವತಿ ಶಿಫಾ ಬೇರೆಯವನ ಜೊತೆ ಪ್ರೀತಿಯಲ್ಲಿ ಬಿದ್ದದ್ದಳು. ಆಕೆಯ ಮನವೊಲಿಸಲು ಯತ್ನಿಸಿದೆ. ಆದರೆ ಆಕೆ ಕೇಳಲಿಲ್ಲ. ಅದಕ್ಕೆ ಕೊಲೆ ಮಾಡಿದೆ ಎಂದು ಒಪ್ಪಿಕೊಂಡಿದ್ದಾನೆ.

ಘಟನಾ ಸ್ಥಳಕ್ಕೆ ಸಿಂಧನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಮೃತ ಯುವತಿಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Exit mobile version