Site icon PowerTV

ತರಗತಿಯಲ್ಲೇ ವಿದ್ಯಾರ್ಥಿಯನ್ನು ವರಿಸಿದ ಪ್ರಾಧ್ಯಾಪಕಿ

ಕೋಲ್ಕತ್ತಾ: ಪ್ರಾಧ್ಯಾಪಕರೊಬ್ಬರು ಕಾಲೇಜು ವಿದ್ಯಾರ್ಥಿಯನ್ನು ತರಗತಿಯಲ್ಲೇ ವಿವಾಹ ಆಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು. ಘಟನೆ ಬಗ್ಗೆ ತನಿಖೆ ನಡೆಸಲು ಆದೇಶ ಹೊರಡಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಕೋಲ್ಕತ್ತಾದಿಂದ ಸುಮಾರು 150 ಕಿಮೀ ದೂರದಲ್ಲಿರುವ ನಾಡಿಯಾದಲ್ಲಿರುವ ಹರಿಂಗಟಾ ಟೆಕ್ನಾಲಜಿ ಕಾಲೇಜಿನ ಸೈಕಾಲಜಿ ವಿಭಾಗದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೌಲಾನಾ ಅಬುಲ್ ಕಲಾಂ ಆಜಾದ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಅಡಿಯಲ್ಲಿ ಕಾಲೇಜು ಕಾರ್ಯನಿರ್ವಹಿಸುತ್ತದೆ. ಪ್ರೊಫೆಸರ್‌ ಪಾಯಲ್ ಬ್ಯಾನರ್ಜಿ ವಧುವಿನ ಉಡುಗೆ ತೊಟ್ಟು ಹೂಮಾಲೆ ಧರಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಇದನ್ನೂ ಓದಿ :ಕ್ಲಾಸ್‌ ರೂಂನಲ್ಲೇ ವಿದ್ಯಾರ್ಥಿ ಜೊತೆ ಶಿಕ್ಷಕಿ ವಿವಾಹ: ವಿಡಿಯೋ ವೈರಲ್​

ಆದರೆ ಘಟನೆ ಬಗ್ಗೆ ಶಿಕ್ಷಕಿ ಸ್ಪಷ್ಟನೆ ನೀಡಿದ್ದು ಇದು ನಿಜವಾದ ಮದುವೆಯಲ್ಲ. ಶೈಕ್ಷಣಿಕ ಉದ್ದೇಶಕ್ಕಾಗಿ ಈ ರೀತಿಯ ಮಾದರಿ ತೋರಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು. ಶಿಕ್ಷಕಿಯನ್ನು ರಜೆಯ ಮೇಲೆ ಕಳುಹಿಸಲಾಗಿದೆ. ಸೂಕ್ತ ತನಿಖೆ ಇಲ್ಲದೆ ಶಿಕ್ಷಕಿ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version