Site icon PowerTV

ಸುಧಾಕರ್ ನಮ್ಮ ಪಕ್ಷಕ್ಕೆ ಐರನ್​ ಲೆಗ್​ ರಾಜಕಾರಣಿ : ರೇಣುಕಾಚಾರ್ಯ

ದಾವಣಗೆರೆ : ಸಂಸದ ಡಾ, ಸುಧಾಕರ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದು. ಸುಧಾಕರ್​ ನಮ್ಮ ಪಕ್ಷಕ್ಕೆ ಐರನ್​ಲೆಗ್​, ಅವನೊಬ್ಬ ಥರ್ಡ್​ಕ್ಲಾಸ್​ ರಾಜಕಾರಣಿ ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು.

ದಾವಣಗೆರೆಯಲ್ಲಿ ಮಾತನಾಡಿದ ರೇಣುಕಾಚಾರ್ಯ ಸುಧಾಕರ್​ ವಿರುದ್ದ ವಾಗ್ದಾಳಿ ನಡೆಸಿದ್ದು. ‘ಸುಧಾಕರ್​ ನಮ್ಮ ಪಕ್ಷಕ್ಕೆ ಬಂದಾಗ ಇಂಧನ ಸಚಿವ ಸ್ಥಾನ ಬೇಕು ಎಂದು ಪಟ್ಟು ಹಿಡಿದ್ದಿದ್ದ. ಕಾಂಗ್ರೆಸ್​ನಲ್ಲಿ ಆತನಿಗೆ ಏನು ಸಿಗದ ಕಾರಣ ಆತ ನಮ್ಮ ಪಕ್ಷಕ್ಕೆ ಬಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಎರಡು ಖಾತೆಗೆ ಪಟ್ಟು ಹಿಡಿದಿದ್ದ. ಆತನೊಬ್ಬ ಥರ್ಡ್​ಕ್ಲಾಸ್​ ರಾಜಕಾರಣಿ.

ಆತ ಸಚಿವನಾಗಿದ್ದಾಗ ಶಾಸಕರ ಕರೆ ಸ್ವೀಕಾರ ಮಾಡುತ್ತಿರಲ್ಲ. ನಾನು ಜಗಳಾ ಮಾಡಿದ್ದಕ್ಕೆ ಹೊನ್ನಾಳಿಗೆ ಎರಡು ನೂರು ಹಾಸಿಗೆ ಆಸ್ಪತ್ರೆ ತಂದೆ. ಧ್ವನಿ ಸತ್ತ ಶಾಸಕರು ಯಾರು ಕೂಡ ಹೇಳುತ್ತಿರಲಿಲ್ಲ. ದಾವಣಗೆರೆಗೆ ಜಯದೇವ ಆಸ್ಪತ್ರೆ ಶಾಖೆ ಮಂಜೂರು ಮಾಡಿದ್ದರು ಆದ್ರೆ ಅದನ್ನ ರದ್ದು ಮಾಡಿದ್ದು ಸುಧಾಕರ್. ಸಚಿವನಾಗಿದ್ದಾಗ ನೀನು ಮಾಡಬಾರದ್ದು ಮಾಡಿದ್ದೀಯಾ‌ ನಿನ್ನ ಬಂಡವಾಳ ಬಯಲು ಮಾಡುವೆ.

ಇದನ್ನೂ ಓದಿ : ‘ಈ ಸಲ ಕಪ್ ನಮ್ದೇ’ ಸ್ವಗ್ರಾಮದಲ್ಲಿ ಸಂತಸ ಹಂಚಿಕೊಂಡ ಬಿಗ್​ಬಾಸ್​ ಖ್ಯಾತಿಯ ಹನುಮಂತ

ಡಾ,ಸುಧಾಕರ್ ಬಿಜೆಪಿ ಪಕ್ಷಕ್ಕೆ ಒಂದು ಐರನ್ ಲೇಗ್, ಸುಧಾಕರ ನಂತಹ ವ್ಯಕ್ತಿಯಿಂದಲೇ ನಾವುಗಳು ಸೋತಿದ್ದು. ಇವರು ನಡೆದುಕೊಂಡ ರೀತಿಯಿಂದ ಬಿಜೆಪಿ ವಿಧಾನ ಸಭೆಯಲ್ಲಿ ಸೋತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಗ್ಗೆ ಮಾತಾಡಿದ್ರೆ ಹುಷಾರ್. ನಿನ್ನ ಬಂಡವಾಳ ಬಯಲು ಮಾಡುವೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

 

Exit mobile version