Site icon PowerTV

ನನ್ನನ್ನು ರಾಜಕೀಯ ಸಮಾಧಿ ಮಾಡಲು ವಿಜಯೇಂದ್ರ ಯತ್ನಿಸುತ್ತಿದ್ದಾರೆ : ಕೆ.ಸುಧಾಕರ್​

ಬೆಂಗಳೂರು : ಮಾಧ್ಯಮದ ಜೊತೆ ಮಾತನಾಡಿದ ಸಂಸದ ಸುಧಾಕರ್​ ವಿಜಯೇಂದ್ರ ವಿರುದ್ದ ಗುಡುಗಿದ್ದು. ನನ್ನನ್ನು ರಾಜಕೀಯ ಸಮಾಧಿ ಮಾಡಲು ವಿಜಯೇಂದ್ರ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ವಿಜಯೇಂದ್ರ ‘ 2019ರಲ್ಲಿ ಬಿಜೆಪಿ ಪಕ್ಷವನ್ನು ನಂಬಿ, ರಾಷ್ಟ್ರೀಯತೆ ನಂಬಿ, ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರ್ಪಡೆಯಾದೆ. ನಮ್ಮ ಇಡೀ ಭವಿಷ್ಯವನ್ನ, ರಾಜಕೀಯ ಭವಿಷ್ಯ, ನನ್ನ ನಂಬಿದವರು, ಅವರ ಭವಿಷ್ಯ ನಂಬಿ ಬಿಜೆಪಿಗೆ ಬಂದೆ. ಯಡಿಯೂರಪ್ಪ ಅವರನ್ನ ಸಿಎಂ ಮಾಡಲು ಸ್ವಾಭಿಮಾನದಿಂದ ಹೋರಾಟ ಮಾಡಿದೆ. ಯಡಿಯೂರಪ್ಪರನ್ನು ನಂಬಿ 17 ಜನ ಪಕ್ಷ ತೊರೆದು ಬಿಜೆಪಿಗೆ ಬಂದರು.

ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ಬೊಮ್ಮಾಯಿ ಬಂದರು, ಅವರ ಜೊತೆಗೂ ನಾವು ಕೆಲಸ ಮಾಡಿದೆವು. ನಾನೂ ಎಂದು ಚಿಕ್ಕಬಳ್ಳಾಪುರದಲ್ಲಿ ಸೋಲೇ ಕಂಡಿರಲಿಲ್ಲ. ಬಿಜೆಪಿ ಗೆಲುವೇ ಕಂಡಿರಲಿಲ್ಲ.
ಆದರೆ ನಾನು ಗೆದ್ದು ಬಂದೆ, ಈಗ ಒಂದು ಬಾರಿ ಸೋತಿದ್ದೇನೆ. ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ, ಸ್ವಜನ ಪಕ್ಷಪಾತಕ್ಕೆ ಮನ್ನಣೆ ಇಲ್ಲ, ಕುಟುಂಬ ರಾಜಕೀಯ ಇಲ್ಲ ಅಂತ ನಂಬಿದ್ದೇನೆ‌. ಪ್ರಧಾನಿ ಮೋದಿ ಆಡಳಿತ, ರಾಷ್ಟ್ರೀಯ ಸ್ವಯಂ ಸೇವಾ ಸಂಘ ನಂಬಿದ್ದೇನೆ‌ ಎಂದು ಹೇಳಿದರು.

ಇದನ್ನೂ ಓದಿ : ಚೈನಾ ಸೂಪರ್​ ಪವರ್​ ಆಗಿದೆ, ಆದರೆ ನಾವಿನ್ನು ಗೋಮೂತ್ರ ಕುಡಿಯುತ್ತಿದ್ದೇವೆ : ಕಿಶೋರ್​

ವಿಜಯೇಂದ್ರ ವಿರುದ್ದ ಗುಡುಗಿದ ಸುಧಾಕರ್​ !

ನಾವು ವಿಜಯೇಂದ್ರರ ಅಪ್ಪನನ್ನು ಸಿಎಂ ಮಾಡಬೇಕು ಎಂದು ಪಕ್ಷ ಬಿಟ್ಟು ಬಂದೋ, ಆದರೆ ವಿಜಯೇಂದ್ರ ನಮ್ಮನ್ನು ರಾಜಕೀಯವಾಗಿ ಸಮಾಧಿ ಮಾಡಲು ಯತ್ನಿಸುತ್ತಿದ್ದಾನೆ. ನಮ್ಮ ಕೇಂದ್ರ ನಾಯಕರು ಇವರನ್ನ ಹೇಗೆ ಪರಿಗಣಿಸಿದ್ದಾರೆ ಗೊತ್ತಿಲ್ಲ. ಇವರು ಈಗಾಗಲೇ ಮುಖ್ಯಮಂತ್ರಿ ಆಗಿದ್ದಾರೋ ಅಥವಾ ಅದಕ್ಕಿಂತ ಮೇಲಿದ್ದಾರೋ ಗೊತ್ತಿಲ್ಲ. ನನ್ನನ್ನ ಸೋಲಿಸಲು ಚಿಕ್ಕಬಳ್ಳಾಪುರ ಸಿಟ್ಟಿಂಗ್​ ಎಂಎಲ್​ಎ ಹಾಗೂ ಹಿಂಬಾಲಕರು ಪ್ರಯತ್ನ ಮಾಡಿದ್ದರು. ಆದರೆ ನನ್ನ ಕ್ಷೇತ್ರದ ಜನ ನನ್ನ ಕೈ ಹಿಡಿದ್ರು‌. ಅವರಿಗಿಂತ ಹೆಚ್ಚು ಮತ ಪಡೆದು ಗೆದ್ದಿದ್ದೇನೆ‌. ವಿಜಯೇಂದ್ರ ಏಕಮೇವ ಚಕ್ರಾಧಿಪತಿಯಾಗಿದ್ದಾರೆ.

Exit mobile version