Site icon PowerTV

ಸಂಧಿ ನೋವಿಗೆಹುಲಿ ಮೂತ್ರ ಪರಿಹಾರ: ಏನಿದು ಚೀನಾದ ಹೊಸ ಉದ್ಯಮ

ಚೀನಾದ ಮೃಗಾಲಯವೊಂದು ಹುಲಿ ಮೂತ್ರವನ್ನು ಮಾರಾಟ ಮಾಡಿ ಹಣ ಗಳಿಸುತ್ತಿದೆಯಂತೆ. ಉಳುಕು, ಸ್ನಾಯು ನೋವು, ಸಂಧಿವಾತಕ್ಕೆ ಔಷಧಿಯೆಂದು ಹೇಳಿ 250 ಎಂ.ಎಲ್‌ ಹುಲಿ ಮೂತ್ರವನ್ನು ರೂ. 600 ಕ್ಕೆ ಮಾರಾಟ ಮಾಡುತ್ತಿದೆಯಂತೆ. ಈ ಸುದ್ದಿ ವೈರಲ್‌ ಆಗುತ್ತಿದ್ದಂತೆ ತಜ್ಞರು ಹುಲಿ ಮೂತ್ರದಿಂದ ಯಾವುದೇ ಆರೋಗ್ಯ ಪ್ರಯೋಜನಗಳಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ.

ಟೆಕ್ನಾಲಜಿಯ ವಿಷಯದಲ್ಲಿ ಎಲ್ಲರನ್ನೂ ಮೀರಿಸುವಂತೆ ಬೆಳೆದು ನಿಂತಿರುವ ಚೀನಾ ತನ್ನ ಆಹಾರ ಪದ್ಧತಿ, ಕೆಲವೊಂದು ವಿಚಿತ್ರ ಸಂಗತಿಗಳ ಮೂಲಕವೇ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಇದೀಗ ಚೀನಾದ ಮೃಗಾಲಯವೊಂದು ಹುಲಿ ಮೂತ್ರ ಮಾರಾಟ ಮಾಡುವ ಮೂಲಕ ಸುದ್ದಿಯಲ್ಲಿದೆ.

ಇದನ್ನೂ ಓದಿ :ಅಪರಿಚಿತ ಕಾರಿನಲ್ಲಿ ಕೋಟಿ ರೂಪಾಯಿ ಪತ್ತೆ : ಸ್ಥಳೀಯರಿಗೆ ಅಚ್ಚರಿ, ಪೊಲೀಸರಿಗೆ ಅನುಮಾನ !

ಚೀನಾದ ಮಾಧ್ಯಮದ ಪ್ರಕಾರ ಚೀನಾದ ಸಿಚುವಾನ್ ಪ್ರಾಂತ್ಯದ ಮೃಗಾಲಯವೊಂದು ಸೈಬೀರಿಯನ್ ಹುಲಿ ಮೂತ್ರವನ್ನು ಬಾಟಲಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಇದನ್ನು ಸ್ನಾಯು ನೋವು ಮತ್ತು ದೀರ್ಘಕಾಲದ ಸಂಧಿವಾತ ಮತ್ತು ಉಳುಕುಗಳಿಂದ ಪರಿಹಾರವನ್ನು ನೀಡುತ್ತದೆ ಎಂದು ಬಾಟಲಿಗಳ ಮೇಲೆ ಬರೆಯಲಾಗಿದೆ. ಆದರೆ ಕೆಲ ತಜ್ಙರು ಇದು ಪರಿಣಾಮಕಾರಿಯಲ್ಲ ಎಂದು ಹೇಳಿದ್ದಾರೆ.

Exit mobile version