Site icon PowerTV

ಅಪರಿಚಿತ ಕಾರಿನಲ್ಲಿ ಕೋಟಿ ರೂಪಾಯಿ ಪತ್ತೆ : ಸ್ಥಳೀಯರಿಗೆ ಅಚ್ಚರಿ, ಪೊಲೀಸರಿಗೆ ಅನುಮಾನ !

ಕಾರವಾರ: ಅಪರಿಚಿತ ಕಾರಿನಲ್ಲಿ ಬರೋಬ್ಬರಿ ಒಂದು ಕೋಟಿಗೂ ಹೆಚ್ಚು ಹಣ ಸಿಕ್ಕಿದೆ. ನಿರ್ಜನ ಪ್ರದೇಶದಲ್ಲಿ ಅನುಮಾನಸ್ಪದವಾಗಿ ನಿಲ್ಲಿಸಿಟ್ಟ ಕಾರಿನಲ್ಲಿದ್ದ ಹಣದ ಸುತ್ತ ಮತ್ತು ಕಾರಿನ ಸುತ್ತ ಹತ್ತಾರು ಅನುಮಾನದ ಹುತ್ತ ಹುಟ್ಟಿಕೊಂಡಿದೆ.

ಹೌದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಮನಗುಳಿ ಬಳಿ ನಿರ್ಜನ ಪ್ರದೇಶದಲ್ಲಿ ಅನುಮಾನಸ್ಪದವಾಗಿ ನಿಂತಿದ್ದ ಕಾರು ಸ್ಥಳೀಯರ ಕಣ್ಣಿಗೆ ಬಿದ್ದಿದೆ. ಅನುಮಾನಸ್ಪದವಾಗಿ ನಿಂತ ಕಾರಿನ ಡಿಕ್ಕಿ ಓಪನ್ ಆಗಿತ್ತು, ಕಾರಿನ ನಾಲ್ಕು ಡೋರ್​ಗಳು ಕೂಡ ಓಪನ್​ ಇತ್ತು. ಹೀಗೆ ಅನುಮಾನಸ್ಪದವಾಗಿ ನಿಂತ ಕಾರನ್ನು ನೋಡಿದ ಸ್ಥಳೀಯರು ಅಂಕೋಲಾ ಪೋಲಿಸರಿಗೆ ಮಾಹಿತಿ ನೀಡುದ್ದಾರೆ.

ಮಾಹಿತಿಯ ಮೇರೆಗೆ ಕೂಡಲೆ ಸ್ಥಳಕ್ಕೆ ಬಂದ ಪೋಲಿಸರು ಸುತ್ತಮುತ್ತ ಪರಿಶೀಲನೆ ನಡೆಸಿದ್ದಾರೆ. ಆದರೆ ಯಾವ ಸುಳಿವು ಸಿಗದ ಹಿನ್ನಲೆ. ಕಾರಿನ ಬಾಗಿಲು ತೆರೆದು ನೋಡಿದ್ದಾರೆ. ಈ ವೇಳೆ ಕಾರಿನ ಸೀಟ್​ ಕೆಳಗೆ ದೊಡ್ಡ ಬಾಕ್ಸ್​ ಪತ್ತೆಯಾಗಿದೆ. ಬಾಕ್ಸ್​ ತೆಗೆದು ನೋಡಿದ ಪೊಲೀಸರಿಗೆ ಬಾಕ್ಸ್​ನಲ್ಲಿ 500ರೂ ಮುಖಬೆಲೆಯ 1ಕೋಟಿ 15ಲಕ್ಷ ಹಣ ಪತ್ತೆಯಾಗಿದ್ದು. ಇದು ಯಾರ ಹಣ? ಇದು ಲೀಗಲ್ ಹಣವೋ ಅಥವಾ ಯಾರಾದ್ರು ರಾಬರಿ ಮಾಡಿ ತಂದ ಹಣವೊ ಎಂಬ ಹತ್ತಾರು ಅನುಮಾನಗಳು ಇದರ ಸುತ್ತ ಸುತ್ತುತ್ತಿವೆ.

ಇದ್ನೂ ಓದಿ : ಇಷ್ಟು ದಿನ ಸುಮ್ಮನಿದ್ದೆ, ಇನ್ನೇನಿದ್ರೂ ಯುದ್ದ: ವಿಜಯೇಂದ್ರ ವಿರುದ್ದ ಗುಡುಗಿದ ಸುಧಾಕರ್​​

ಜೊತೆಗೆ ಕಾರ್​​ಗೆ ಪೇಕ್​ ನಂಬರ್​ ಪ್ಲೇಟ್​ ಅಳವಡಿಸಿರುವ ಶಂಕೆಯೂ ವ್ಯಕ್ತವಾಗಿದ್ದು. ಕಾರಿನ ಒಳಗೆ ಮತ್ತೆ ಎರಡು ನಂಬರ್ ಪ್ಲೇಟ್​ಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಜೊತೆಗೆ ಮಂಗಳೂರು ಜಿಲ್ಲೆಯನ್ನ ಪ್ರತಿನಿಧಿಸುವ ಕ್ರಿಕೇಟ್ ಜೆರ್ಸಿ ಮತ್ತು ಮರಾಠ ಯೋಧ ಎನ್ನುವ ಒಂದು ಜೆರ್ಸಿ ಕೂಡಾ ಪತ್ತೆಯಾಗಿದ್ದು ಕಾರು ಮುಲತಃ ಮಂಗಳೂರಿನವರದ್ದೆ ಇರಬಹುದು ಅಥವಾ ಮುಂಬೈ ಮಹಾರಾಷ್ಟ್ರ ಲಿಂಕ್ ಇರಬಹುದು ಎನ್ನಲಾಗಿದೆ. ಆದರೆ ಕಾರಿನಲ್ಲಿ  ದೊರೆತಿರುವ ಹಣದ ಸುತ್ತ ಅನುಮಾನದ ಹುತ್ತವೇ ಬೆಳೆದು ನಿಂತಿದೆ.

Exit mobile version