Site icon PowerTV

ಇಷ್ಟು ದಿನ ಸುಮ್ಮನಿದ್ದೆ, ಇನ್ನೇನಿದ್ರೂ ಯುದ್ದ: ವಿಜಯೇಂದ್ರ ವಿರುದ್ದ ಗುಡುಗಿದ ಸುಧಾಕರ್​​

ಬೆಂಗಳೂರು : ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಸದ ಸುಧಾಕರ್ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ ವಾಗ್ದಾಳಿ ನಡೆಸಿದ್ದು. ಇಷ್ಟು ದಿನ ಸುಮ್ಮನಿದ್ದ, ಆದರೆ ಇನ್ನೇನಿದ್ರೂ ಯುದ್ದ ಎಂದು ವಿಜಯೇಂದ್ರ ವಿರುದ್ದ ಬಹಿರಂಗವಾಗಿ ಸಮರ ಸಾರಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೆ. ಸುಧಾಕರ್​ ‘ ವಿಜಯೇಂದ್ರ ಮರಳು ಸೀಮೆಗೆ ಬಂದು ಪಕ್ಷ ಸಂಘಟನೆ ಮಾಡಲಿ.ಒಂದು ಸೀಟು ಗೆದ್ದು ತೋರಿಸಲಿ. ಗೋವಿಂದ ಕಾರಜೋಳ ಅವರ ಕ್ಷೇತ್ರದಲ್ಲಿ ಅವರನ್ನೇ ಹೊಡೆಯಲು ಹೋದವರನ್ನ ಅಧ್ಯಕ್ಷ ಮಾಡಿದ್ದಾರೆ. ಪಕ್ಷದ ಸೀನಿಯರ್ ಯಾರನ್ನೂ ಪರಿಗಣಿಸಿಲ್ಲ. ಸಿಟಿ ರವಿ, ರಮೇಶ್ ಜಾರಕಿಹೊಳಿ, ಎಲ್ಲರನ್ನೂ ಮಲಗಿಸದ್ದಾರೆ. ಇಷ್ಟು ದಿನ ಶಾಂತವಾಗಿದ್ದೆ,ಆದರೆ ಇನ್ನೇನಿದ್ರೂ ಯುದ್ಧ ಎಂದು ಹೇಳಿದರು.

ಇದನ್ನೂ ಓದಿ :ನನ್ನನ್ನು ರಾಜಕೀಯ ಸಮಾಧಿ ಮಾಡಲು ವಿಜಯೇಂದ್ರ ಯತ್ನಿಸುತ್ತಿದ್ದಾರೆ : ಕೆ.ಸುಧಾಕರ್​

ಮುಂದುವರಿದು ಮಾತನಾಡಿದ ಸುಧಾಕರ್ ‘ಹೈಕಮಾಂಡ್ ನನ್ನ ಮೇಲೆ ವಿಶ್ವಾಸ ಇಟ್ಟಿದೆ. ಇವರನ್ನ ನಂಬಿ ರಿಯಲ್ ಎಸ್ಟೇಟ್​ನವರು ಹಣ ತಂದು ಕೊಡಬಹುದು ಅಷ್ಟೇ. ಉತ್ತರ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಏನಾಯ್ತು.? ಕಾಂಗ್ರೆಸ್ ಪ್ರಭಲ ಇರೋ ಕಡೆ ನಾವು ಸಂಘಟನೆ ಮಾಡಿದ್ದೇವೆ. ಬಿಜೆಪಿ ಪ್ರಭಲ ಇರೋ ಕಡೆ ತಿಣುಕಾಡಿಕೊಂಡು ಗೆದ್ರಿ.

ಅದು ನಿಮಗೆ ಬೇಕಾದ ಅಭ್ಯರ್ಥಿ ಹಾಕಿಕೊಂಡು ಅಡ್ಜಸ್ಟ್‌ಮೆಂಟ್​ ಮಾಡಿಕೊಂಡಿದ್ದೀರಿ. ನಮ್ಮ ಜಿಲ್ಲೆಯಲ್ಲಿ ಅತಿ ಹೆಚ್ಚು ಮೆಂಬರ್ ಶಿಪ್ ಆಗಿದೆ. ಯಾರು ಕೆಲಸ ಮಾಡಿದ್ರು ಅವರನ್ನ ಕೈಬಿಟ್ಟಿದ್ದೀರಿ. ಕೆಲಸ ಮಾಡದವರನ್ನ ನೇಮಕ ಮಾಡಿದ್ದೀರಿ. ನಮ್ಮ ಹೈಕಮಾಂಡ್ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನ ಭೇಟಿ ಮಾಡಿ ಎಲ್ಲಾ ವಿಚಾರ ತಿಳಿಸ್ತೇನೆ. ಇಲ್ಲಿ ಇನ್ನು ಉಳಿಯೋದು ಕಷ್ಟ ಎಂದು ಪಕ್ಷ ತೊರೆಯುವ ರೀತಿಯಲ್ಲಿ ಮಾತನಾಡಿದರು.

Exit mobile version