Site icon PowerTV

ಉಡುದಾರದಿಂದ ನೇಣು ಬಿಗಿದುಕೊಂಡು ಅಪ್ರಾಪ್ತ ಬಾಲಕ ಸಾ*ವು : ನೋಡುತ್ತ ನಿಂತ ತಂಗಿ !

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲೊಂದು ಆಘಾತಕಾರಿ ಘಟನೆ ನಡೆದಿದ್ದು. 13 ವರ್ಷದ ಧೃವ ಎಂಬಾತ ತನ್ನ ಸೊಂಟದಲ್ಲಿದ್ದ ಉಡುದಾರದಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಅಣ್ಣ ಏನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂಬ ಅರಿವು ಇಲ್ಲದ ಆತನ ತಂಗಿ ಸುಮ್ಮನೆ ನೋಡುತ್ತ ನಿಂತಿದ್ದಳು ಎಂದು ತಿಳಿದು ಬಂದಿದೆ.

ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಗೊಲ್ಲರಹಟ್ಟಿಯ ರತ್ನ‌ ನಗರದಲ್ಲಿ ಘಟನೆ ನಡೆದಿದೆ. ನಿನ್ನೆ (ಜ.28) ಬಾಲಕನ ತಂದೆ-ತಾಯಿಯಿಬ್ಬರು ಕೆಲಸಕ್ಕೆ ಎಂದು ಹೋಗಿದ್ದರು. ಈ ವೇಳೆ ಬಾಲಕ ಮತ್ತು ಆತನ ತಂಗಿ ಶಾಲೆ ಮುಗಿಸಿಕೊಂಡು ಬಂದು ಮನೆಯಲ್ಲಿದ್ದರು. ಈ ವೇಳೆ ಬಾಲಕ ತನ್ನ ಪ್ಯಾಂಟ್​ ತೆಗೆದು ಸೊಂಟದ ಉಡುದಾರವನ್ನು ಫ್ಯಾನ್​ ಕಟ್ಟಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸುಮಾರು ಸಂಜೆ 7 ಗಂಟೆಗೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಇದನ್ನೂ ಓದಿ : ಕುಂಭಮೇಳದಲ್ಲಿ ಕಾಲ್ತುಳಿತ : ರೈಲುಗಳು ಬಂದ್​, ವಂದತಿಗಳನ್ನು ನಂಬಬೇಡಿ ಎಂದ ಸಿಎಂ. ಯೋಗಿ

ನೇಣು ಗಂಟು ಬಿಗಿಯಾಗುತ್ತಿದ್ದಂತೆ, ಬಾಲನ ಕುತ್ತಿಗೆಯೂ ಬಿಗಿದಿದ್ದು. ಸ್ವಲ್ಪ ಸಮಯದ ನಂತರ ದಾರ ಕಟ್​ ಆಗಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಅಲ್ಲೆ ನೋಡುತ್ತ ನಿಂತಿದ್ದ ಬಾಲಕಿ ತನ್ನ ಅಣ್ಣ ಏನು ಮಾಡುತ್ತಿದ್ದಾನೆ ಎಂಬ ಅರಿವು ಇಲ್ಲದೆ ನೋಡುತ್ತಾ ನಿಂತಿದ್ದಳು ಎಂದು ತಿಳಿದುಬಂದಿದೆ. ಸಂಜೆ ಬಾಲಕನ ತಾಯಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು. ಅಕ್ಕಪಕ್ಕದ ಮನೆಯವರ ಸಹಾಯ ಪಡೆದು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆ ವೇಳೆಗೆ ಬಾಲಕ ಮೃತಪಟ್ಟಿರುವುದನ್ನು ವೈದ್ಯರು ದೃಡಪಡಿಸಿದ್ದಾರೆ.

ಇಷ್ಟು ಚಿಕ್ಕ ವಯಸ್ಸಿಗೆ ಬಾಲಕ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Exit mobile version