Site icon PowerTV

ಮದ್ವೆಯಾಗಿ 12 ವರ್ಷದ ನಂತರ ಮೊದಲ ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಸಾ*ವು !

ಬೆಳಗಾವಿ : ನಗರದ ಬಿಮ್ಸ್​ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದು. ಮದುವೆಯಾಗಿ 12 ವರ್ಷದ ನಂತರ ಮೊದಲ ಮಗುವಿನ ಆಗಮನದಲ್ಲಿದ್ದ ಬಾಣಂತಿ ಸಾವಿನ ಮನೆ ಸೇರಿದ್ದಾಳೆ.

ಹೌದು.. ಕಳೆದ ಕೆಲವಾರಗಳಿಂದ ಬಾಣಂತಿ ಸಾವಿನ ಪ್ರಕರಣಗಳು ರಾಜ್ಯದಲ್ಲಿ ಕಡಿಮೆಯಾಗಿದ್ದವು. ಆದರೆ ಇದೀಗ ಮತ್ತೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ 31 ವರ್ಷದ ಅಂಜಲಿ ಪಾಟೀಲ್​ ಎಂಬಾಕೆ ಹೆಣ್ಣು ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್​ ಡಿಕ್ಕಿ : ಪಿಯುಸಿ ವಿದ್ಯಾರ್ಥಿ ಸಾ*ವು !

ನಿನ್ನೆ ಮಧ್ಯಾಹ್ನಾ ಬಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದ ಅಂಜಲಿಗೆ ಮಧ್ಯರಾತ್ರಿ ಹೆರಿಗೆಯಾಗಿತ್ತು. ಆದರೆ ಬೆಳಗಿನ ಜಾವ ಮಹಿಳೆ ಸಾವನ್ನಪ್ಪಿದ್ದರು. ಹೆರಿಗೆಯಾದ ವೇಳೆ ಚೆನ್ನಾಗಿದ್ದ ಅಂಜಲಿ ಏಕಾಏಕಿ ಸಾವನ್ನಪ್ಪಿದ್ದರಿಂದ ಶಾಕ್​ಆದ ಕುಟುಂಬಸ್ಥರು ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆ ಮುಂಭಾಗದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು. ನ್ಯಾಯ ಸಿಗುವವರೆಗೂ ಶವವನ್ನು ಕೊಂಡೊಯ್ಯುವುದಿಲ್ಲ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.

ಕುಟುಂಬಸ್ಥರ ಪ್ರತಿಭಟನೆಯಿಂದ ಆಸ್ಪತ್ರೆಯಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದ್ದು. ಸ್ಥಳಕ್ಕೆ ಬೆಳಗಾವಿ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Exit mobile version