Site icon PowerTV

ನೇಣು ಬಿಗಿದುಕೊಂಡು ವ್ಯಕ್ತಿ ಸಾ*ವು: ಕೊಲೆ ಮಾಡಿ ಆತ್ಮಹ*ತ್ಯೆಯ ನಾಟಕವಾಡಿದಳ ಐನಾತಿ ಹೆಂಡತಿ !

ಯಾದಗಿರಿ : ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ ಎಂದು ಮೊದಲಿಗೆ ಶಂಕಿಸಲಾಗಿತ್ತು. ಆದರೆ ಇದೀಗ ಸ್ವಂತ ಹೆಂಡತಿಯೆ ತನ್ನ ಗಂಡನನ್ನು ಕೊಲೆ ಮಾಡಿ ಆತ್ಮಹತ್ಯೆಯ ನಾಟಕವಾಡುತ್ತಿದ್ದಾಳಾ ಎಂಬ ಶಂಕೆ ಮೂಡಿದೆ.

ಯಾದಗಿರಿ ನಗರದ ಗಂಜ್ ಬಳಿಯಿರುವ ಕೋಲಿವಾಡ ಬಡಾವಣೆಯಲ್ಲಿ ವ್ಯಕ್ತಿಯೊರ್ವ ಕುಡಿದ ಮತ್ತಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಂಬಿಸಲಾಗಿದೆ. ವೆಂಕಟೇಶ ಮೃತ (35) ದುರ್ದೈವಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಕುಡುಕ ವೆಂಕಟೇಶ ದಿನನಿತ್ಯ ಜಗಳ ಮಾಡಿಕೊಂಡು ಬೀದಿ ರಂಪಾಟ ಮಾಡುತ್ತಿದ್ದನ್ನಂತೆ. ಅದೇ ರೀತಿ ನಿನ್ನೆ ಸಹ ಕುಡಿದ ಅಮಲಿನಲ್ಲಿ ಜಗಳ ತೆಗೆದಿದ್ದಾನೆ. ಆದರೆ ಇದರ ಬಗ್ಗೆಯಾರೂ ಕೂಡ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಇಂದು ಬೆಳಿಗ್ಗೆ ವೆಂಕಟೇಶ್​ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಇದನ್ನೂ ಓದಿ : ಅಯ್ಯಾ ಎಂದರೇ ಸ್ವರ್ಗ, ಎಲವೋ ಎಂದರೆ ನರಕ : ಸಿ.ಎಂ ಸಿದ್ದರಾಮಯ್ಯ !

ಇನ್ನೂ ಮೃತ ವೆಂಕಟೇಶ ಕಳೆದ ಕೆಲವು ದಿನಗಳ ಹಿಂದೆ ತನ್ನ ತಂದೆಯೊಂದಿಗೆ ಆಸ್ತಿ ವಿಚಾರಕ್ಕೆ ಜಗಳ ಕೂಡಾ ಆಡಿದ್ದನು. ಆದರೆ ವೆಂಕಟೇಶ್​ ಸದಾ ಕಾಲ ಕುಡಿಯುತ್ತ ಕಾಲ ಕಳೆಯುತ್ತಿದ್ದರಿಂದ ಆಸ್ತಿಯನ್ನು ಹಾಳು ಮಾಡುತ್ತಾನೆ ಎಂದು ತಿಳಿದು ಆಸ್ತಿಯನ್ನು ವೆಂಕಟೇಶನ ಸಹೋದರಿ ಹೆಸರಿಗೆ ಮಾಡಿದ್ದನು. ಆದರೆ ಇತ್ತೀಚಗೆ ವೆಂಕಟೇಶನ ಸಹೋದರಿ ಹೆರಿಗೆಗೆ ಎಂದು ತವರಿಗೆ ಬಂದಿದ್ದನು. ಆದರೆ ವೆಂಕಟೇಶ್ ಆಕೆಯನ್ನು ಮನೆಗೆ ಕರೆಸಿಕೊಳ್ಳಲು ನಿರಾಕರಿಸಿದ್ದನು. ಇದೇ ವಿಚಾರಕ್ಕೆ ನಿನ್ನೆ ರಾತ್ರಿ ಮನೆಯಲ್ಲಿ ಹೆಂಡತಿಯೊಂದಿಗೆ ಜಗಳವನ್ನು ಆಡಿದ್ದನು.

ಇದೀಗ ಈ ಸಣ್ಣ ಜಗಳವೇ ಕೊಲೆಯಲ್ಲಿ ಅಂತ್ಯವಾಗಿದೆ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಯಾದಗಿರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರ ತನಿಖೆಯ ನಂತರವೇ ಸತ್ಯಾಂಶ ಹೊರಬರಬೇಕಿದೆ.

Exit mobile version