Site icon PowerTV

ಎಲ್ಲಾನು ಫ್ರೀಯಾಗಿ ಕೊಡೋದಕ್ಕೆ ಹಾಗುತ್ತಾ : ಡಿ.ಕೆ ಶಿವಕುಮಾರ್​ !

ಬೆಂಗಳೂರು : ನಗರದಲ್ಲಿ ಜಲಮಂಡಳಿ ಸಭೆಯಲ್ಲಿ ಭಾಗವಹಿಸಿದ್ದ ಡಿಸಿಎಂ ಡಿ.ಕೆ ಶಿವಕುಮಾರ್​ ಉಚಿತ ಯೋಜನೆಗಳ ಬಗ್ಗೆ ಬೇಸರದ ಮಾತುಗಳನ್ನು ಆಡಿದ್ದು. ಎಲ್ಲವನ್ನು ಫ್ರೀಯಾಗಿ ಕೊಡೋದಕ್ಕೆ ಆಗುತ್ತಾ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಜೊತೆಗೆ ಈ ಯೋಜನೆಗಳು ರಾಜ್ಯ ಸರ್ಕಾರವನ್ನು ಆರ್ಥಿಕವಾಗಿ ತತ್ತರಿಸುವಂತೆ ಮಾಡಿವೆ. ಇದರ ಬೆನ್ನಲ್ಲೆ ಇಂದು ಬೆಂಗಳೂರಿನಲ್ಲಿ ನಡೆದ ಜಲಮಂಡಳಿ ಸಭೆಯಲ್ಲಿ ಭಾಗವಹಿಸಿದ್ದ ಡಿ.ಕೆ ಶಿವಕುಮಾರ್​, ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಹಾಡಹಗಲೇ ಗುಂಡಿನ ದಾಳಿ :ಮಗಳ ಸಾವಿಗೆ ಸೇಡು ತೀರಿಸಿಕೊಂಡನಾ ತಂದೆ..!

ಬಸ್​ ಟಿಕೆಟ್​ ದರ ಹೆಚ್ಚಾಗಿದೆ, ಮೆಟ್ರೋ ದರ ಹೆಚ್ಚಾಗಿದೆ. ಈಗಿರುವಾಗ ನೀರಿನ ದರ ಜಾಸ್ತಿ ಆದರೆ ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ. ‘ಎಲ್ಲಾವನ್ನು ಉಚಿತವಾಗಿ ಕೊಡೊದಕ್ಕೆ ಆಗುತ್ತಾ, ಪೆಟ್ರೋಲ್ ಬೆಲೆ, ಡಿಸೇಲ್ ಬೆಲೆ ಜಾಸ್ತಿ ಆದ ಮೇಲೆ ಎಲ್ಲಾ ಬೆಲೆ ಜಾಸ್ತಿ ಆಗಬೇಕು ಅಲ್ವ. ಪವರ್ ಬೆಲೆ ಜಾಸ್ತಿ ಆಗ್ತಾ ಇದೆ, ಆದರೆ ನಮ್ಮ ಸರ್ಕಾರ ಬಂದ ಮೇಲೆ ಪವರ್ ಬೆಲೆ ಕಡಿಮೆ ಮಾಡಿದ್ವಿ, 75 ಕೋಟಿ ಪವರ್ ಬೆಲೆ ಜಾಸ್ತಿ ಆಗ್ತಾ ಇದೆ, ಹೀಗಿರುವಾಗ ಎಲ್ಲಾ ಫ್ರೀಯಾಗಿ ಕೊಡೋದಕ್ಕೆ ಆಗುತ್ತಾ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಡಿ.ಕೆ ಶಿವಕುಮಾರ್​, ‘ ನೀರಿನ ಬೆಲೆ ಏರಿಕೆ ಅನಿವಾರ್ಯವಾಗಿದೆ. ಈ ಕುರಿತು ಮುಂದಿನವಾರ ಅಧಿಕಾರಿಗಳು ವರದಿ ಕೊಡುತ್ತಾರೆ. ವರದಿ ನೋಡಿ ನಂತರ ಲೀಟರ್​ಗೆ ಎಷ್ಟು ದರ ಹೆಚ್ಚಿಸಬೇಕಲು ಎಂಬ ಬಗ್ಗೆ ತೀರ್ಮನ ಕೈಗೊಳ್ಳುತ್ತೇವೆ ಎಂದು ಹೇಳಿದರು.

Exit mobile version