Site icon PowerTV

ಗೃಹಜ್ಯೋತಿ ಹೊಡೆತಕ್ಕೆ ತತ್ತರಿಸಿದ ಬೆಸ್ಕಾಂ: ಹನುಮಂತನ ಬಾಲದಂತೆ ಬೆಳೆಯುತ್ತಿದೆ ಸಾಲದ ಹೊರೆ !

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀಯಿಂದ ಬೆಸ್ಕಾಂ ಸಾಲದ ಸುಳಿಯಲ್ಲಿ ಸಿಲುಕಿದೆ. ಅದರಲ್ಲೂ ಈ ಬಾರಿಯ ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುವ ಹಿನ್ನಲೆ ಜನರ ಬೇಡಿಕೆಗೆ ತಕ್ಕಂತೆ ವಿದ್ಯುತ್​ ಪೂರೈಕೆ ಮಾಡುವುದು ಬೆಸ್ಕಾಂಗೆ ತಲೆನೋವಾಗಿ ಪರಿಣಮಿಸಿದೆ.

ಹೌದು.. ರಾಜ್ಯ ಸರ್ಕಾರ ನೀಡಿರುವ ಪಂಚ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮೀ ಯೋಜನೆ ರಾಜ್ಯದ ಜನರ ಮೇಲೆ ಆಗುತ್ತಿದ್ದ ಆರ್ಥಿಕ ಹೊರೆಯನ್ನು ತಗ್ಗಿಸುವಲ್ಲಿ ಸಫಲವಾಗಿದೆ. ಆದರೆ ಇದೇ ಯೋಜನೆ ಬೆಸ್ಕಾಂಗೆ ತಲೆನೋವು ತಂದಿದೆ. KPCL ಮತ್ತು KPTCLಗೆ ಬೆಸ್ಕಾಂ ಸಾವಿರಾರು ಕೋಟಿಯಷ್ಟು ಬಾಕಿ ಉಳಿಸಿಕೊಂಡಿದೆ ಎಂದು ಮಾಹಿತಿ ದೊರೆತಿದೆ.

ಕೆಪಿಸಿಎಲ್​ನಿಂದ ಖರೀದಿ ಮಾಡಿರುವ ವಿದ್ಯುತ್​ಗೆ 3000 ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿದ್ದು. ಕೆಪಿಟಿಸಿಎಲ್​ನಿಂದ ಖರೀದಿ ಮಾಡಿರುವ ವಿದ್ಯುತ್​ಗೆ ಪ್ರತಿಯಾಗಿ ಬೆಸ್ಕಾಂ 2000 ಸಾವಿರ ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿದೆ. ಪ್ರತಿ ತಿಂಗಳು ಗೃಹಲಕ್ಷ್ಮೀ ಯೋಜನೆಗೆ ಎಂದು ಅನುದಾನ ನೀಡುತ್ತಿದ್ದರು ಕೂಡ ಬೆಸ್ಕಾಂಗೆ ವಿದ್ಯುತ್​ ಖರೀದಿ ಸವಾಲಾಗಿ ಪರಿಣಮಿಸಿದೆ.

ಇದನ್ನೂ ಓದಿ: ‘ಸರಿಗಮಪ’ ಖ್ಯಾತಿಯ ಮಂಜಮ್ಮ ವಿಧಿವಶ !

ಈ ಬಾರಿ ಬೇಸಿಗೆಯಲ್ಲಿ ವಿದ್ಯುತ್​ ಬೇಡಿಕೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆ ಇದ್ದು. ಬೇಡಿಕೆ ತಕ್ಕಂತೆ ವಿದ್ಯುತ್​ ಪೂರೈಸಲು ಬೆಸ್ಕಾಂ ಅಧಿಕಾರಿಗಳು ಇತರೆ ರಾಜ್ಯಗಳಲ್ಲಿ ವಿದ್ಯುತ್​ ಖರೀದಿಗೆ ಮುಂದಾಗಿವೆ ಎಂದು ತಿಳಿದು ಬಂದಿದೆ. ಈಗಾಗಲೇ 3000 ಕೋಟಿಯಷ್ಟು ಸಾಲ ಮಾಡಿರುವ ಬೆಸ್ಕಾಂ. ಈ ಬಾರಿಯ ಬೇಸಿಗೆಯಲ್ಲಿ ವಿದ್ಯುತ್​ ಪೂರೈಕೆ ಮಾಡಲು ಮತ್ತೆ ಸಾಲದ ಮೊರೆ ಹೋಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

Exit mobile version