Site icon PowerTV

ಕುಡುಕ ಗಂಡಂದಿರ ಕಾಟ ತಾಳಲಾರದೆ ಮನೆ ಬಿಟ್ಟು ಪರಸ್ಪರ ಮದುವೆಯಾದ ಇಬ್ಬರು ಮಹಿಳೆಯರು!

ಉತ್ತರ ಪ್ರದೇಶ : ಗೋರಖ್​ಪುರದಲ್ಲಿ ಇಬ್ಬರು ಮಹಿಳೆಯರು ತಮ್ಮ ಕುಡುಕ ಗಂಡಂದಿರ ಕಾಟವನ್ನು ತಾಳಲಾರದೆ ಮನೆ ಬಿಟ್ಟು ಬಂದಿದ್ದು. ಇದೀಗ ಇಬ್ಬರು ಶಿವನ ದೇವಾಲಯದಲ್ಲಿ ಪರಸ್ಪರ ಮದುವೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಹೌದು.. ಗೋರಖ್​ಪುರದಲ್ಲಿ ಈ ಘಟನೆ ನಡೆದಿದ್ದು. ಪೋಟೊದಲ್ಲಿರುವ ಈ ಇಬ್ಬರು ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದರು. ಕಳೆದ 6 ವರ್ಷಗಳಿಂದ ಸ್ನೇಹಿತೆಯರಾಗಿದ್ದ ಇವರು ತಮ್ಮ ಮನೆಯಲ್ಲಿ ಗಂಡಂದಿರು ನೀಡುತ್ತಿದ್ದ ಕಿರುಕುಳವನ್ನು ಹೇಳಿಕೊಳ್ಳುತ್ತಿದ್ದರು. ಇದರಿಂದ ಬೇಸತ್ತಿದ್ದ ಇಬ್ಬರು ಇದೀಗ ಯಾಕೆ ಇಬ್ಬರು ಮದುವೆಯಾಗಬಾರದು ಎಂದು ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ಇದನ್ನೂ ಓದಿ : ಮದುವೆ ವಾರ್ಷಿಕೋತ್ಸವದ ದಿನವೇ ಗಂಡು ಮಗುವಿಗೆ ಜನ್ಮ ನೀಡಿದ ಹರಿಪ್ರಿಯಾ !

ಕವಿತಾ ಮತ್ತು ಗುಂಜಾ ಅಲಿಯಾಸ್ ಬಬ್ಲು ಎಂಬ ಇಬ್ಬರು ಮಹಿಳೆಯರು ಗುರುವಾರ ಸಂಜೆ ದಿಯೋರಿಯಾದ ಚೋಟಿ ಕಾಶಿ ಎಂದು ಪ್ರಸಿದ್ಧವಾದ ಶಿವನ ದೇವಾಲಯದಲ್ಲಿ ವಿವಾಹವಾಗಿದ್ದಾರೆ. ಒಬ್ಬ ಮಹಿಳೆಗೆ ಆಕೆಯ ಪತಿ ಕುಡಿದು ಬಂದು ಪ್ರತಿದಿನ ಹಲ್ಲೆ ನಡೆಸುತ್ತಿದ್ದ. ಆಕೆಗೆ ನಾಲ್ಕು ಮಕ್ಕಳಿದ್ದಾರೆ. ಇನ್ನೊಬ್ಬ ಮಹಿಳೆ ತನ್ನ ಪತಿ ಕೂಡ ಅತಿಯಾಗಿ ಮದ್ಯಪಾನ ಮಾಡುತ್ತಿದ್ದ , ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಿದ್ದಾಳೆ. ಇದೀಗ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

Exit mobile version