Site icon PowerTV

ಬದುಕಿ ಬಾಳಬೇಕಿದ್ದ ಬಾಲಕಿ ಹೃದಯಾಘಾತಕ್ಕೆ ಬಲಿ !

ಮೈಸೂರು: ಹೃದಯಾಘಾತದಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ  ಸಾವನ್ನಪ್ಪಿದ ಘಟನೆ ಮೈಸೂರು  ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ಕೆಲ್ಲೂರು ಗ್ರಾಮದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು 15 ವರ್ಷದ ದೀಪಿಕಾ ಎಂದು ಗುರುತಿಸಲಾಗಿದೆ.

50 ದಾಟಿದ ನಂತರ ಬರುತ್ತಿದ್ದ ಹೃದಯಘಾತ ಇಂದು ಪುಟ್ಟಮಕ್ಕಳನ್ನು ಬಲಿ ಪಡೆದುಕೊಳ್ಳುತ್ತಿದೆ. ಹೌದು.. ಇತ್ತೀಚೆಗೆ ಅನೇಕ ಹೃದಯಾಘಾತದ ಪ್ರಕರಣಗಳು ವರದಿಯಾಗುತ್ತಿದ್ದು. ಬದುಕಿ ಬಾಳಬೇಕಿದ್ದ ಯುವ ಜನಾಂಗ ಇದಕ್ಕೆ ಬಲಿಯಾಗುತ್ತಿದೆ.

ಇದನ್ನೂ ಓದಿ : ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ ಅಮಿತ್ ಶಾ !

ಇದೇ ರೀತಿಯ ಘಟನೆ ಮೈಸೂರಿನಲ್ಲಿ ನಡೆದಿದ್ದು. ಗ್ರಾಮದ ನಾಗರಾಜ್ ಮತ್ತು ವಸಂತ್​ ಎಂಬುವವರ ಪುತ್ರಿ 15 ವರ್ಷದ ದೀಪಿಕಾ ಹೃದಯಾಘಾತದಿಂದ ಬಲಿಯಾಗಿದ್ದಾರೆ. ರಾವಂದೂರು ಕರ್ನಾಟಕ ಪಬ್ಲಿಕ್​ ಶಾಲೆಯಲ್ಲಿ SSLC ವ್ಯಾಸಂಗ ಮಾಡುತ್ತಿದ್ದ ದೀಪಿಕಾ ಭಾನುವಾರ ಇದ್ದಕ್ಕಿಂದ ಅಸ್ವಸ್ಥಳಾಗಿದ್ದಳು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬಾಲಕಿ ಮಾರ್ಗಮಧ್ಯದಲ್ಲಿತೆ ಉಸಿರು ಚೆಲ್ಲಿದ್ದಾಳೆ ಎಂದು ಮಾಹಿತಿ ದೊರೆತಿದೆ.

 

Exit mobile version