Site icon PowerTV

ರಸ್ತೆ ಬದಿಯ ಮರಕ್ಕೆ ಥಾರ್ ಜೀಪ್ ಡಿಕ್ಕಿ : ಓರ್ವ ಸಾ*ವು : ಮೂವರು ಗಂಭೀರ !

ಹಾಸನ : ಚಾಲಕನ ನಿಯಂತ್ರಣ ತಪ್ಪಿದ ಥಾರ್ ಜೀಪ್​ ರಸ್ತೆಯ ಬದಿಯ ಮರಕ್ಕೆ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ್ದು. ಮೂವರು ಗಂಭೀರವಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು 28 ವರ್ಷದ ನಿಶ್ಚಿತ್​ ಎಂದು ಗುರುತಿಸಲಾಗಿದೆ.

ಹಾಸನದ ಶಂಕರನಹಳ್ಳಿ-ಮಲ್ಲಿಗೆವಾಳು ಬಳಿ ಘಟನೆ ಜರುಗಿದ್ದು. ಅತಿಯಾದ ವೇಗದ ಚಾಲನೆಯೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿದ್ದು. ಡಿಕ್ಕಿಯ ರಭಸಕ್ಕೆ ಥಾರ್​ ಜೀಪು ಸಂಪೂರ್ಣ ನಜ್ಜುಗುಜ್ಜಾಗಿದೆ.

ಇದನ್ನೂ ಓದಿ: ಬದುಕಿ ಬಾಳಬೇಕಿದ್ದ ಬಾಲಕಿ ಹೃದಯಾಘಾತಕ್ಕೆ ಬಲಿ !

ಅಪಘಾತದ ರಭಸಕ್ಕೆ ಜೀಪ್​ನಲ್ಲಿ ಓರ್ವ ಸಾವನ್ನಪ್ಪಿದ್ದು. ಮೃತನನ್ನು ಅರಕಲಗೂಡು ತಾಲ್ಲೂಕಿನ, ಕೊಂಗಳ್ಳಿ ಗ್ರಾಮದ ಶಿಕ್ಷಕ ಚಂದ್ರ ಎಂಬುವವರ ಪುತ್ರ ನಿಶ್ಚಿತ್ ಎಂದು ಗುರುತಿಸಲಾಗಿದೆ. ಜೀಪ್​ನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು. ಗಾಯಾಳುಗಳನ್ನು ಹರ್ಷ, ಕೀರ್ತಿ, ರಾಧಿಕಾ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತವಾದ ಸ್ಥಳಕ್ಕೆ ಗೊರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Exit mobile version