Site icon PowerTV

ಜಸ್ಪ್ರೀತ್ ಬುಮ್ರಾ ಮುಡಿಗೆ ICC 2024ರ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ

ಭಾರತೀಯ ಸ್ಟಾರ್​ ಬೌಲರ್​​ ಜಸ್ಪ್ರಿತ್​ ಬುಮ್ರಾಗೆ 2024ರ ವರ್ಷದ ಕ್ರಿಕೆಟಿಗನಾಗಿ ಆಯ್ಕೆ ಮಾಡಿದ್ದು. 2024 ರಲ್ಲಿ ಸ್ಮರಣೀಯ ಪ್ರದರ್ಶನ ನೀಡಿದ್ದ ಜಸ್ಪ್ರೀತ್ ಬುಮ್ರಾ ಇದೀಗ ವರ್ಷದ ಟೆಸ್ಟ್ ಕ್ರಿಕೆಟಿಗರಾಗಿ ಆಯ್ಕೆಯಾಗಿದ್ದಾರೆ.

ಜಸ್ಪ್ರೀತ್ ಬುಮ್ರಾ ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅದರಲ್ಲೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತದ ಪರವಾಗಿ ಸ್ಥಿರ ಪ್ರದರ್ಶನ ನೀಡಿದ ಏಕೈಕ ಆಟಗಾರನೆಂದರೆ ಅದು ಬುಮ್ರಾ. ಸಂಪೂರ್ಣ ಸರಣಿಯಲ್ಲಿ ತಮ್ಮ ಕರಾರುವಕ್ಕದ ದಾಳಿಯಿಂದ ಕಾಂಗರೊಗಳನ್ನು ಕಟ್ಟಿಹಾಕಿದ್ದ ಬುಮ್ರಾ ಭಾರತವನ್ನು ವೈಟ್​ವಾಶ್​ ಮುಖಭಂಗದಿಂದ ತಪ್ಪಿಸಿದ್ದರು. ಈ ಅತ್ಯುತ್ತಮ ಪ್ರದರ್ಶನಕ್ಕೆ ಇವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯು ಲಭಿಸಿತ್ತು. ಇದೀಗ ಬುಮ್ರಾ ಈ ವರ್ಷಧ ಟೆಸ್ಟ್​ ಕ್ರಿಕೆಟಿಗನಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಪ್ರವಾಸಿಗರ ಆಕರ್ಷಣೆಯ ಕೇಂದ್ರವಾದ ‘ಭೀಮ’ :ರಗಡ್​ ಲುಕ್​ ಕಂಡು ಪ್ರೇಕ್ಷಕರು ಫಿದಾ !

ಜಸ್ಪ್ರೀತ್ ಬುಮ್ರಾ 2024 ರಲ್ಲಿ ಒಟ್ಟು 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಈ ಅವಧಿಯಲ್ಲಿ ಅವರು 14.92 ಸರಾಸರಿಯಲ್ಲಿ 71 ವಿಕೆಟ್ ಪಡೆದರು. ಈ ಮೂಲಕ ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಎನಿಸಿಕೊಂಡಿದ್ದರು. ಅವರನ್ನು ಬಿಟ್ಟರೆ ಬೇರಾವ ಬೌಲರ್‌ಗೂ 60 ವಿಕೆಟ್‌ಗಳ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ. ಟೆಸ್ಟ್ ಇತಿಹಾಸದಲ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ 70+ ವಿಕೆಟ್‌ಗಳನ್ನು ಪಡೆದ 17 ಬೌಲರ್‌ಗಳ ಪೈಕಿ ಬುಮ್ರಾ ಮಾತ್ರ ಕಡಿಮೆ ಸರಾಸರಿ ಹೊಂದಿರುವ ಬೌಲರ್ ಎನಿಸಿಕೊಂಡಿದ್ದಾರೆ​. ಇದರ ಜೊತೆಗೆ ಕ್ಯಾಲೆಂಡರ್ ವರ್ಷದಲ್ಲಿ 70+ ಟೆಸ್ಟ್ ವಿಕೆಟ್‌ಗಳನ್ನು ಪಡೆದ ಭಾರತದ ನಾಲ್ಕನೇ ಬೌಲರ್ ಎಂಬ ಹೆಗ್ಗಳಿಕೆಗೂ ಬುಮ್ರಾ ಪಾತ್ರರಾಗಿದ್ದಾರೆ.

Exit mobile version