Site icon PowerTV

ಮೋದಿ, ಅಮಿತ್​ ಶಾ ಸ್ವರ್ಗಕ್ಕೆ ಹೋಗಲ್ಲ : ಮಲ್ಲಿಕಾರ್ಜುನ್​ ಖರ್ಗೆ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಯಾಗ್​ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಭೇಟಿ ನೀಡಿದ ಕುರಿತು ಮಧ್ಯಪ್ರದೇಶದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಗಂಗಾ ಸ್ನಾನದಿಂದ ಬಡತನ ದೂರವಾಗಲ್ಲ ಎಂದು ಹೇಳಿದರು.

ಬಿಜೆಪಿಯ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ್​ ಖರ್ಗೆ “ಕ್ಯಾಮೆರಾಗಳಿವೆ ಎಂಬ ಕಾರಣಕ್ಕೆ  ಗಂಗಾ ನದಿಯಲ್ಲಿ ಸ್ನಾನ ಮಾಡಲು ಬಿಜೆಪಿಯವರು ಪರಸ್ಪರ ಪೈಪೋಟಿ ನಡೆಸುತ್ತಿದ್ದಾರೆ” ನಾನು ಬೇರೆಯವರ ನಂಬಿಕೆಗೆ ದಕ್ಕೆ ತರಲು ಬಯಸುವುದಿಲ್ಲ. ಆದರೆ ಬಿಜೆಪಿ- ಆರ್​​ಎಸ್​ಎಸ್​ನವರು ದೇಶದ್ರೋಹಿಗಳು ಎಂಬಂತೆ ಮಲ್ಲಿಕಾರ್ಜುನ್​ ಖರ್ಗೆ ಬಣ್ಣಿಸಿದರು. ಜೊತೆಗೆ ಧರ್ಮದ ಹೆಸರಿನಲ್ಲಿ ಬೇರೆಯವರ ಶೋಷಣೆಯನ್ನು ಕಾಂಗ್ರೆಸ್​ ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಖರ್ಗೆ ‘RSS ಮುಖ್ಯಸ್ಥ ಮೋಹನ್​ ಭಾಗವತ್​ ಪ್ರತಿ ಮಸೀದಿಯ ಕೆಳಗೆ ಶಿವಲಿಂಗವನ್ನು ಹುಡುಕಬೇಡಿ ಎಂದು ಹೇಳಿದ್ದಾರೆ. ಆದರೆ ಈ ಹೇಳಿಕೆಯ ಹೊರತಾಗಿಯೂ ಬಿಜೆಪಿ ಆರ್​ಎಸ್​ಎಸ್​ ಜನರಗೆ ಪ್ರಚೋದನೆ ನೀಡುವುದನ್ನು ಮುಂದುವರಿಸಿದೆ. ಇವರಿಬ್ಬರು ದೇಶದ್ರೋಹಿಗಳು ಎಂದು ಹೇಳಿದರು.

ಇದನ್ನೂ ಓದಿ : ಮಹೇಶ್​​ ಬಾಬುರನ್ನು ಕಟ್ಟಿಹಾಕಲು ರಾಜ್​ಮೌಳಿ ಕಸರತ್ತು : ನಿಗೂಢ ವಿಡಿಯೋದ ಅರ್ಥವೇನು ?

ಜನರು ಬಡತನ ಮತ್ತು ನಿರುದ್ಯೋಗದಿಂದ ಮುಕ್ತರಾಗಲು ಬಯಸಿದರೆ, ಸಂವಿಧಾನವನ್ನು ರಕ್ಷಿಸಿ ಮತ್ತು ಒಗ್ಗಟ್ಟಿನಿಂದ ಇರಿ, ಕಾಂಗ್ರೆಸ್​ನನ್ನು ನಿಂದಿಸುವ ಆರ್​ಎಸ್​ಎಸ್​ ಸ್ವತಂತ್ರ್ಯ ಪೂರ್ವದಲ್ಲಿ ಬ್ರಿಟಿಶರ ಜೊತೆ ನಿಂತುಕೊಂಡಿತ್ತು. ಅವರು ಸ್ವಾತಂತ್ರ್ಯಕ್ಕಾಗಿ ಏನನ್ನು ಮಾಡಲಿಲ್ಲ. ಅಮಿತ್​ ಶಾ ರಾಜ್ಯ ಸಭೆಯಲ್ಲಿ ನಿಂತುಕೊಂಡು ಅಂಬೆಡ್ಕರ್​ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದು ಅವರ ನಿಜವಾದ ಭಾವನೆಯನ್ನು ನೀಡುತ್ತದೆ ಎಂದ ವಾಗ್ದಾಳಿ ನಡೆಸಿದರು.

ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿಯ ಪುರಿ ಲೋಕಸಭಾ ಸಂಸದ ಸಂಬಿತ್ ಪಾತ್ರ, ಕಾಂಗ್ರೆಸ್ ಮುಖ್ಯಸ್ಥರ ಹೇಳಿಕೆಯು “ಕೋಟ್ಯಂತರ ಹಿಂದೂಗಳ ನಂಬಿಕೆಯ ಮೇಲಿನ ದಾಳಿ” ಎಂದು ಹೇಳಿದರು. ‘ಸನಾತನದ ಹೆಮ್ಮೆ, ಮಹಾಕುಂಭ ಉತ್ಸವ’ದ ಬಗ್ಗೆ ಕಾಂಗ್ರೆಸ್ ಪಕ್ಷದ ದ್ವೇಷವು ಕೋಟ್ಯಂತರ ಹಿಂದೂಗಳ ನಂಬಿಕೆಯ ಮೇಲಿನ ದಾಳಿಯಾಗಿದೆ ಎಂದು ಬಿಜೆಪಿ ನಾಯಕ ಹೇಳಿದರು.

 

Exit mobile version