Site icon PowerTV

ಶಿವಣ್ಣ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ !

ಬೆಂಗಳೂರು : ನಟ ಶಿವರಾಜ್​ ಕುಮಾರ್​ ಮನೆಗೆ ಮುಖ್ಯಮಂತ್ರಿ  ಸಿದ್ದರಾಮಯ್ಯ ಭೇಟಿ ನೀಡಿದ್ದು. ಹ್ಯಾಟ್ರಿಕ್​ ಹೀರೋ ಆರೋಗ್ಯ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.

ನಟ ಶಿವರಾಜ್​ ಕುಮಾರ್​ ಕ್ಯಾನ್ಸರ್​ನ ಶಸ್ತ್ರ ಚಿಕಿತ್ಸೆಗೆ ಎಂದು ಕಳೆದ ತಿಂಗಳು ಬೆಂಗಳೂರಿನಿಂದ ಅಮೇರಿಕಾಗೆ ಪ್ರಯಾಣಿಸಿದ್ದರು. ಅಮೇರಿಕಾದ ಮಿಯಾಮಿ ಕ್ಯಾನ್ಸರ್​ ಆಸ್ಪತ್ರೆಯಲ್ಲಿ ಶಿವಣ್ಣಗೆ ಶಸ್ತ್ರ ಚಿಕಿತ್ಸೆ ನಡೆದಿತ್ತು. ಇದೀಗ ಶಸ್ತ್ರ ಚಿಕಿತ್ಸೆ ಸಫಲಗೊಂಡು ನಿನ್ನೆ (ಜನವರಿ.26) ಶಿವಣ್ಣ ತಾಯ್ನಾಡಿಗೆ ಮರಳಿದ್ದರು. ಶಿವಣ್ಣನನ್ನು ಅವರ ಅಭಿಮಾನಿಗಳು ಬಹಳ ಸಂಭ್ರಮದಿಂದ ಬರಮಾಡಿಕೊಂಡಿದ್ದರು.

ಇದನ್ನೂ ಓದಿ :ಕುಡುಕ ಗಂಡಂದಿರ ಕಾಟ ತಾಳಲಾರದೆ ಮನೆ ಬಿಟ್ಟು ಪರಸ್ಪರ ಮದುವೆಯಾದ ಇಬ್ಬರು ಮಹಿಳೆಯರು!

ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಣ್ಣರ ಮನೆಗೆ ಭೇಟಿ ನೀಡಿದ್ದು. ಅವರ ಆರೋಗ್ಯ ವಿಚಾರಿಸಿದ್ದಾರೆ. ಭೇಟಿ ನೀಡಿದ್ದ ಪೋಟೊಗಳನ್ನು ಸಿಎಂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈ ಕೆಳಗಿನಂತೆ ಬರೆದುಕೊಂಡಿದ್ದಾರೆ.

‘ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ಅನಾರೋಗ್ಯದಿಂದ ವಿದೇಶದಲ್ಲಿ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದು, ಅವರ ಆರೋಗ್ಯ ವಿಚಾರಿಸಿದ್ದಾರೆ. ಶಿವರಾಜ್ ಕುಮಾರ್ ಹಿಂದಿನಂತೆ ಮತ್ತೆ ಕ್ರಿಯೇಟಿವ್ ಆಗಿರುವುದನ್ನು ನೋಡಿ ಖುಷಿಯಾಗಿದೆ.

ಶಿವರಾಜ್ ಕುಮಾರ್ ಅವರ ಅನಾರೋಗ್ಯವನ್ನು ಆತ್ಮಬಲದಿಂದ ಗೆದ್ದು ಶಾಂತಿಯುತವಾಗಿ ಬದುಕಲಿ ಎಂದು ಅಭಿಮಾನಿಗಳ ಹಾರೈಕೆಗಳು
Exit mobile version