Site icon PowerTV

ಮಸಾಜ್​ ಪಾರ್ಲರ್​ ಮೇಲೆ ನೈತಿಕ ಪೊಲೀಸ್​ಗಿರಿ :ಕ್ರಮ ಕೈಗೊಳ್ಳುತ್ತೇನೆ ಎಂದ ಸಚಿವ ಪರಮೇಶ್ವರ್

ಮಂಗಳೂರು : ಮಸಾಜ್​ ಪಾರ್ಲರ್​ ಮೇಲೆ ಶ್ರೀ ರಾಮ ಸೇನಾ ಸಂಘಟನೆ ದಾಳಿ ನಡೆಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು. ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಸಾದ್ ಅತ್ತಾವರ ನೇತೃತ್ವದ ಶ್ರೀರಾಮ ಸೇನಾ ಸಂಘಟನೆ ನೇತೃತ್ವದಲ್ಲಿ ದಾಳಿ ನಡೆಸಿದ್ದು. ಮಂಗಳೂರಿನ ಬಿಜೈ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿರುವ ಮಸಾಜ್​ ಸೆಂಟರ್​ಗೆ ದಾಳಿ ನಡೆಸಿದ್ದು. ಮಸಾಜ್​ ಸೆಂಟರ್​ನಲ್ಲಿದ್ದ ಪೀಟೋಪಕರಣಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಮಾಹಿತಿ ದೊರೆತಿದೆ.

ಇದನ್ನೂ ಓದಿ:ಗೂಡ್ಸ್​​ ವಾಹನ ಪಲ್ಟಿ : 25ಕ್ಕೂ ಹೆಚ್ಚು ನರೇಗಾ ಕಾರ್ಮಿಕರಿಗೆ ಗಂಭೀರ ಗಾಯ !

ಶ್ರೀ ರಾಮಸೇನಾ ಕಾರ್ಯಕರ್ತರ ಆಕ್ರೋಶಕ್ಕೆ ಮಸಾಜ್​ ಪಾರ್ಲರ್​ನಲ್ಲಿದ್ದ ಗಾಜುಗಳು ಪುಡಿಗೊಂಡಿದ್ದು. ಮಸಾಜ್​ ಪಾರ್ಲರ್​ನಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಅವಾಜ್​ ಹಾಕಿದ್ದಾರೆ. ಜೊತೆಗೆ ಮಂಗಳೂರಿನಲ್ಲಿರುವ ಮಸಾಜ್​ ಸೆಂಟರ್​ಗಳನ್ನು ಮುಚ್ಚುವಂತೆ ಶ್ರೀರಾಮ ಸೇನೆ ಆಗ್ರಹಿಸಿದೆ. ಈ ಕುರಿತು ಗೃಹ ಸಚಿವ ಪರಮೇಶ್ವರ್​ ಹೇಳಿಕೆ ನೀಡಿದ್ದು. ಕೃತ್ಯ ಎಸಗಿದವರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

Exit mobile version