Site icon PowerTV

ಕುಂಭಮೇಳದಲ್ಲಿ ಊಟ ಬಡಿಸಿ ಸಂತಸ ಪಟ್ಟ ಸಮಾಜ ಸೇವಕಿ ಸುಧಾಮೂರ್ತಿ !

ಪ್ರಯಾಗ್‌ರಾಜ್: ಉತ್ತರ ಪ್ರದೇಶನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ತೆರಳಿರುವ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿಯವರ ಪತ್ನಿ ಮತ್ತು ರಾಜ್ಯಸಭಾ ಸಂಸದೆ ಸುಧಾ ಮೂರ್ತಿಯವರು ಇಸ್ಕಾನ್ ಶಿಬಿರದಲ್ಲಿ ಭಕ್ತರಿಗೆ ಮಹಾಪ್ರಸಾದ ಬಡಿಸಿದ್ದಾರೆ.

ಮಹಾಪ್ರಸಾದ ತಯಾರಿಕೆಗೆ ಅದಾನಿ ಗ್ರೂಪ್ ಹಾಗೂ ಇಸ್ಕಾನ್ ಸಹಯೋಗದೊಂದಿಗೆ ನಿರ್ಮಿಸಲಾದ ಅಡುಗೆ ಮನೆಯಲ್ಲಿರುವ ಯಂತ್ರಗಳನ್ನು ಇದೇ ವೇಳೆ ಸುಧಾ ಮೂರ್ತಿಯವರು ವೀಕ್ಷಿಸಿದ್ದಾರೆ. ಮಹಾ ಕುಂಭಮೇಳ ಪ್ರದೇಶದಲ್ಲಿ ಪ್ರತಿದಿನ 40 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಮಹಾಪ್ರಸಾದವನ್ನು ವಿತರಿಸಲಾಗುತ್ತಿದೆ.

ಇದನ್ನೂ ಓದಿ : ನೀನೇನು ಮರ್ಯಾದ ಪುರುಷೋತ್ತಮ ಅಲ್ಲ: ಬಿಪಿ ಹರೀಶ್​ ಮೇಲೆ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ !

ಮಹಾಪ್ರಸಾದವನ್ನು ತಯಾರಿಸಲು ಬಳಸುವ ಅಡುಗೆಮನೆ ನೀರನ್ನು ಬಿಸಿಮಾಡಲು ಮತ್ತು ತರಕಾರಿಗಳು ಮತ್ತು ಅಕ್ಕಿಯನ್ನು ಬೇಯಿಸಲು ಬಾಯ್ಲರ್‌ಗಳಂತಹ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಭಾರವಾದ ಆಹಾರ ಪಾತ್ರೆಗಳನ್ನು ಸಾಗಿಸಲು ಟ್ರ್ಯಾಕ್‌ಗಳನ್ನು ಹಾಕಲಾಗಿದೆ. ರೊಟ್ಟಿ ತಯಾರಿಸಲು ಮೂರು ದೊಡ್ಡ ಯಂತ್ರಗಳನ್ನು ಸ್ಥಾಪಿಸಲಾಗಿದೆ. ಈ ಯಂತ್ರಗಳು ಒಟ್ಟಾಗಿ ಒಂದು ಗಂಟೆಯಲ್ಲಿ 10,000 ರೊಟ್ಟಿಗಳನ್ನು ತಯಾರಿಸುತ್ತವೆ.

ಈ ಸ್ಥಳಕ್ಕೆ ಭೇಟಿ ನೀಡಿದ ಸುಧಾಮೂರ್ತಿ ಭಕ್ತರಿಗೆ ಚಪಾತಿ ಬಡಿಸಿ ಸಂತಸ ವ್ಯಕ್ತಪಡಿಸಿದ್ದು. ಕುಂಭಮೇಳಕ್ಕೆ ಭೇಟಿ ನೀಡಿದ್ದು ಸಂತಸ ತಂದಿದೆ ಎಂದು ಹೇಳಿದ್ದಾರೆ.

Exit mobile version