Site icon PowerTV

ದೆಹಲಿ ಚುನಾವಣೆ ದಿನವೇ ಪ್ರಧಾನಿ ಮೋದಿ ಕುಂಭಮೇಳಕ್ಕೆ ಭೇಟಿ !

ದೆಹಲಿ: ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ದೆಹಲಿ ವಿಧಾನಸಭೆ ಚುನಾವಣೆಯ ದಿನದಂದೇ ಪುಣ್ಯ ಸ್ನಾನ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ದೊರೆತಿದೆ.

ಪ್ರಯಾಗ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ವಿಶ್ವದ ಗಮನ ಸೆಳೆಯುತ್ತಿದೆ. ಈ ಕುಂಭಕ್ಕೆ ವಿಶ್ವದ ಅನೇಕ ಭಾಗಗಳಿಂದ ಪ್ರವಾಸಿಗರು, ಭಕ್ತರು ಭೇಟಿ ನೀಡುತ್ತಿದ್ದು. ಈ ಕುಂಭಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಭೇಟಿ ನೀಡಿ ಪುಣ್ಯಸ್ನಾನ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಅದು ಕೂಡ ರಾಷ್ಟ್ರ ರಾಜಧಾನಿ ದೆಹಲಿ ಚುನಾವಣೆಯ ದಿನವೇ (ಫೆ.05) ಮೋದಿ ಕುಂಭಕ್ಕೆ ಭೇಟಿ ನೀಡುತ್ತಿದ್ದಾರೆ.

ಇದನ್ನೂ ಓದಿ : ATM ದರೋಡೆ ಪ್ರಕರಣ : ‘ನನಗೆ ಪುರ್ನಜನ್ಮ ಸಿಕ್ಕಿದೆ’ ಎಂದ ಗಾಯಾಳು ಸಿಬ್ಬಂದಿ !

ಮೋದಿ ಮಾತ್ರವಲ್ಲದೆ, ರಾಷ್ಟ್ರಪತಿ ದೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್ವರ್, ಗೃಹ ಸಚಿವ ಅಮಿತ್ ಶಾ ಕೂಡಾ ಪುಣ್ಯ ಸ್ನಾನ ಮಾಡುವ ದಿನಾಂಕ ನಿಗದಿಯಾಗಿದೆ. ಗೃಹಸಚಿವ ಅಮಿತ್ ಶಾ ಜ.27 ರಂದು, ಉಪರಾಷ್ಟ್ರಪತಿ ಜಗದೀಪ್ ಧನ್ವರ್ ಫೆ.1 ರಂದು, ರಾಷ್ಟ್ರಪತಿ ದೌಪದಿ ಮುರ್ಮು ಫೆ.10 ರಂದು ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಲಿದ್ದಾರೆ. ಕುಂಭಮೇಳಕ್ಕೆ ಗಣ್ಯರು ಭೇಟಿ ನೀಡುತ್ತಿರುವ ಕಾರಣ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
Exit mobile version