Site icon PowerTV

ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡೋದಕ್ಕೆ ನಾಯಕರಿಗೆ ತಾಖತ್​ ಇಲ್ಲ : ಜಿ.ಟಿ ದೇವೇಗೌಡ

ಮೈಸೂರು:‘ ನನ್ನ ಮೇಲೆ ಆಗಲಿ ಯತ್ನಾಳ್ ಮೇಲೆ ಆಗಲಿ ಕ್ರಮ ಕೈಗೊಳ್ಳಲು ನಾಯಕರಿಗೆ ಧಂ ಬೇಕು, ಪಕ್ಷದಿಂದ ಸಸ್ಪೆಂಡ್ ಮಾಡೋಕೆ ಡಿಸ್ಮಿಸ್ ಮಾಡೋಕೆ ತಾಖತ್ ಇರಬೇಕು ಎಂದು ಹೇಳಿದರು.

ಇದನ್ನೂ ಓದಿ: ದೆಹಲಿ ಚುನಾವಣೆ ದಿನವೇ ಪ್ರಧಾನಿ ಮೋದಿ ಕುಂಭಮೇಳಕ್ಕೆ ಭೇಟಿ !

ಜೆಡಿಎಸ್​​ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಜಿಟಿ ದೇವೇಗೌಡ ಇಂದು ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಪಕ್ಷದಿಂದ ಉಚ್ಚಾಟನೆ ವಿಚಾರವಾಗಿ ಮಾತನಾಡಿದ ಶಾಸಕ ಜಿಟಿಡಿ ‘ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ತಾಕತ್​ ನಾಯಕರಲಿಲ್ಲ. ಜನ ಕಟ್ಟುವ ತಾಕತ್​ ಇರೋನು ಸಸ್ಪೆಂಡ್​ ಮಾಡುತ್ತಾನೆ. ಆದರೆ ನಾಯಕರಿಗೆ ಈ ತಾಕತ್​ ಇಲ್ಲ. ಅದಕ್ಕೆ ಉಚ್ಚಾಟನೆ ಮಾಡುತ್ತಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಪರ ಬ್ಯಾಟ್​ ಬೀಸಿದ ಜಿಟಿಡಿ !

ಮೂಡಾ ಹಗರಣ ವಿಚಾರವಾಗಿ ಮಾತನಾಡಿದ ಜಿಟಿಡಿ ‘ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅಗತ್ಯವಿಲ್ಲ
ಯಾವ ಪಕ್ಷದ ಯಾವ ನಾಯಕರ ಮೇಲೆ ಎಷ್ಟು ಎಫ್ಐಆರ್ ಗಳಿವೆ ಗೊತ್ತಾ ? ಸಿದ್ದರಾಮಯ್ಯ ರಾಜೀನಾಮೆ ಯಾಕೆ ಕೊಡಬೇಕು. ನ್ಯಾಯಾಲಯದ ತೀರ್ಮಾನ ಬರಲಿ. ಆಮೇಲೆ ನೋಡೋಣಾ, ತಮ್ಮ ಪಕ್ಷದಲ್ಲಿ ಯಾರ ಮೇಲೆ ಎಷ್ಟು ಎಫ್ಐಆರ್ ಗಳಿವೆ ಎಂಬುದನ್ನು ನಾಯಕರುಗಳು ಮೊದಲು ನೋಡಿಕೊಂಡು ‌ನಂತರ ಸಿದ್ದರಾಮಯ್ಯರ ರಾಜೀನಾಮೆ ಕೇಳಲಿ ಎಂದು ಹೇಳಿದರು.

Exit mobile version