Site icon PowerTV

4 ಮಕ್ಕಳಿದ್ದ ಆಂಟಿಗೆ ಪೋನ್​ ಮಾಡುತ್ತಿದ್ದ ಯುವಕನ ಬೆತ್ತಲೆ ಮಾಡಿ, ಹಲ್ಲೆ ಮಾಡಿದ ಕುಟುಂಬಸ್ಥರು !

ಹುಬ್ಬಳ್ಳಿ : ವಿವಾಹಿತ ಮಹಿಳೆ ಜೊತೆ ಫೋನ್ ನಲ್ಲಿ ಮಾತನಾಡಿದ ಎಂಬ ಕಾರಣಕ್ಕೆ ಯುವಕನನ್ನು ಅಪಹರಣ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಬೆತ್ತಲೆ ಮಾಡಿ ಏರಿಯಾದಲ್ಲಿ ಬೆತ್ತಲೆ ಮೆರವಣಿಗೆ ಮಾಡಿದ ಘನಘೋರ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಟಿಪ್ಪು ನಗರದ 25 ವರ್ಷದ ಮುಜಾಪೀರ್ ಎಂಬ ಯುವಕನನ್ನೇ ಬೆತ್ತಲೆ ಮೆರವಣಿಗೆ ಮಾಡಿದ್ದು ಈತ ತನ್ನ ಮನೆಯ ಪಕ್ಕದ ಆಂಟಿಯೊಬ್ಬಳ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದ ಹೀಗಾಗಿ ಸಾಕಷ್ಟು ಬಾರಿ ಮುಜಾಪೀರ್’ಗೆ ಎಚ್ಚರಿಕೆ ನೀಡಿದರು ಕೂಡಾ ಕ್ಯಾರೆ ಎನ್ನದೇ ಜಾಲಿ…ಜಾಲಿ ಅಂತಾ ಆಂಟಿ ಜೊತೆ ಮಾತನಾಡಿಕೊಂಡ ಇದ್ದ.

ಇದನ್ನೂ ಓದಿ:ಕುಂಭಮೇಳದಲ್ಲಿ ಊಟ ಬಡಿಸಿ ಸಂತಸ ಪಟ್ಟ ಸಮಾಜ ಸೇವಕಿ ಸುಧಾಮೂರ್ತಿ !

ಇದರಿಂದ ರೊಚ್ಚಿಗೆದ್ದ ಮಹಿಳೆಯ ಕುಟುಂಬದವರು ಮುಜಾಪೀರ್ ನನ್ನು ಮನೆಯಿಂದ ಕಿಡ್ನ್ಯಾಪ್ ಮಾಡಿ ಹುಬ್ಬಳ್ಳಿಯ ಹೊರವಲಯದಲ್ಲಿ ಆತನನ್ನು ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಆತನನ್ನು ಬೆತ್ತಲೆಗೊಳಿಸಿ ಆಟೋದಲ್ಲಿ ತಂದು ಹುಬ್ಬಳ್ಳಿಯಲ್ಲಿ ತಂದು ಏರಿಯಾದಲ್ಲಿ ಬಿಟ್ಟು ಹೋಗಿದ್ದಾರೆ.

ಸದ್ಯ ಘಟನೆಯ ಕುರಿತು ಹಲ್ಲೆಗೊಳಗಾದ ಮುಜಾಪೀರ್ ಹೇಳಿದ್ದು ಹೀಗೆ !

ಮುಜಾಪೀರ್ ನನ್ನು ಕರೆದೊಯ್ದ ಮಹಿಳೆಯ ಕುಟುಂಬದವರು ಮುಳ್ಳಿನ ಕಟ್ಟಿಗೆ,ರಾಡ್,ಹಾಗೂ ಬ್ಲೇಡ್ ನಿಂದ ಹಲ್ಲೆ ನಡೆಸಿದ ಪರಿಣಾಮ ಮುಜಾಪೀರ್ ಗಂಭೀರವಾಗಿ ಗಾಯಗೊಂಡಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಅಂತಾ ಮುಜಾಪೀರ್ ತಾಯಿ ಹೇಳಿದ್ದಾಳೆ.

ಒಟ್ಟಿನಲ್ಲಿ ನಾಲ್ಕು ಮಕ್ಕಳಿದ್ದರು ಆಂಟಿಯ ಹಿಂದೆ ಬಿದ್ದು ಬೆಡ್ ನಲ್ಲಿ ಹೊರಳಾಡಿದ್ದ ಮುಜಾಪೀರ್ ಇದೀಗ ಆಂಟಿಯ ಕುಟುಂಬಸ್ಥರಿಂದ ಹೊಡೆತ ತಿಂದು ಬೆಡ್ ಸೇರಿದ್ದಾನೆ.ಕಸಬಾಪೇಟ್ ಠಾಣೆಯ ಪೊಲೀಸರು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೇ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Exit mobile version