Site icon PowerTV

ಕಾರ್ಮಿಕರ ಕೈಗಳ ಮೇಲೆ ಭೀಕರ ಹಲ್ಲೆ ನಡೆಸಿದ್ದ ಮತ್ತೊಂದು ವಿಡಿಯೋ ವೈರಲ್​

ವಿಜಯಪುರ : ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದ ಕೂರತ್ವದ ವಿಶಯಗಳು ಒಂದೊಂದೆ ಹೊರಗೆ ಬರುತ್ತಿದ್ದು. ಇದೀಗ ಕಾರ್ಮಿಕರ ಕೈ ಮೇಲೆ ಹಲ್ಲೆ ನಡೆಸಿದ್ದ ವಿಡಿಯೋ ಹೊರಗರ ಬಂದಿದೆ. ಅಷ್ಟೆ ಅಲ್ಲದೆ ಸುಡುವ ಬೂದಿಯಲ್ಲಿ ಕಾರ್ಮಿಕರ ಕೈ ಇಡುವ ಶಿಕ್ಷೆಯನ್ನು ನೀಡಿದ್ದರು ಎಂದು ತಿಳಿದುಬಂದಿದೆ.

ಈಗಾಗಲೇ ವೈರಲ್ ಆಗಿರುವ ಹಳೆಯ ವಿಡಿಯೋದಲ್ಲಿ ಇಬ್ಬರು ಕಾರ್ಮಿಕರ ಕಾಲಿಗೆ ಹೊಡೆಯುತ್ತಿರುವ ದೃಷ್ಯ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಾರ್ಮಿಕ ಸಚಿವ ಸಂತೋಶ್​ ಲಾಡ್​​ ಇದು ಸತಃ ನಾನೇ ತಲೆ ತಗ್ಗಿಸುವ ವಿಶಯ. ಕೃತ್ಯದಲ್ಲಿ ಪಾಲ್ಗೊಂಡವರ ಮೇಲೆ ಕಠೀಣ ಕ್ರಮಕ್ಕೆ ಆಗ್ರಹಿಸಿದ್ದರು. ಇದಾದ ನಂತರ ವಿಜಯಪುರ ಗ್ರಾಮೀಣ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದರು.

ಇದನ್ನೂ ಓದಿ : ಪುಟ್ಟ ಮಗುವಿನ ಎದುರೆ ಹೆಂಡತಿ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ರಾಕ್ಷಸ ಪತಿ !

ಇದರ ಬೆನ್ನಲ್ಲೆ ಕಾರ್ಮಿಕರ ಮೇಲೆ ದೌರ್ಜನ್ಯ ಎಸೆಗಿರುವ ಮತ್ತೊಂದು ವಿಡಿಯೋ ವೈರಲ್​ ಆಗಿದ್ದು. ಮೂರು ಜನ ಕಾರ್ಮಿಕರ ಕೈಗೆ ದುಷ್ಕರ್ಮಿಗಳು ಪೈಪ್​ನಿಂದ ಹೊಡೆಯುತ್ತಿರುವ ವಿಡಿಯೋ ವೈರಲ್​ ಆಗಿದೆ. ಅಷ್ಟೆ ಅಲ್ಲದೆ ಇಟ್ಟಿಗೆ ತಯಾರಿಸುವ ಬಿಸಿ ಬೂದಿಯಲ್ಲಿ ಕಾರ್ಮಿಕರ ಕೈ ಉಜ್ಜುವ ಶಿಕ್ಷೆಯನ್ನು ದುರುಳರು ನೀಡಿದ್ದಾರೆ.

ಈಗಾಗಲೇ ಪ್ರಕರಣ ಸಂಬಂದ ಐದು ಜನರನ್ನ ಬಂಧಿಸಿದ್ದು, ಇಟ್ಟಿಗೆ ಬಟ್ಟಿ ಮಾಲೀಕ ಖೇಮು ರಾಠೋಡ್, ಸಚಿನ್ ಮಾನವರ್, ವಿಶಾಲ್ ಜುಮನಾಳ್, ರೋಹನ್ ರಾಠೋಡ ಮತ್ತು ಕನಕಮೂರ್ತಿಎಂಬಾರನ್ನು  ಬಂಧಿಸಲಾಗಿದೆ. ಐದು ಜನ ಆರೋಪಿಗಳನ್ನು ಈಗಾಗಲೇ ನ್ಯಾಯಾದೀಶರ ಮುಂದೆ ಹಾಜರುಪಡಿಸಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ದೊರೆತಿದೆ.

Exit mobile version