Site icon PowerTV

ಖ್ಯಾತ ನಿರ್ಮಾಪಕ ದಿಲ್​ರಾಜು ಮತ್ತು ಪುಷ್ಪ ಸಿನಿಮಾ ನಿರ್ದೇಶಕರ ಮನೆ ಮೇಲೆ ಐಟಿ ದಾಳಿ !

ತೆಲುಗಿನ ಖ್ಯಾತ ನಿರ್ಮಾಪಕ ದಿಲ್​ ರಾಜು ಮನೆ ಮೇಲೆ ಬೆಳ್ಳಂಬೆಳಿಗ್ಗೆ ಐಟಿ ಆಧಿಕಾರಿಗಳು ದಾಳಿ ನಡೆಸಿದ್ದು. ದಿಲ್​ರಾಜು ಮನೆ, ಕಛೇರಿ ಹಾಗೂ ಅವರ ಕುಟುಂಬದ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ದಿಲ್​ ರಾಜು ಜೊತೆಗೆ ಪುಷ್ಪ ಸಿನಿಮಾ ನಿರ್ದೇಶಕರ ಮನೆಯ ಮೇಲೆಯೂ ಕೂಡ ಐಟಿ ದಾಳಿ ನಡೆಸಲಾಗಿದೆ.

ಐಟಿ ಇಲಾಖೆಯವರು ಬರೋಬ್ಬರಿ 65 ತಂಡಗಳಲ್ಲಿ ಬಂದಿದ್ದು, ದಿಲ್ ರಾಜುಗೆ ಸಂಬಂಧಿಸಿದ ಎಂಟು ಕಡೆಗಳಲ್ಲಿ ಏಕ ಕಾಲಕ್ಕೆ ದಾಳಿ ನಡೆಸಿದ್ದಾರೆ. ಇದರಲ್ಲಿ ದಿಲ್ ರಾಜು ಅವರ ಮನೆ, ಕಚೇರಿ, ಅವರ ಸಹೋದರ ಸಿರೇಶ್ ಮಗಳು ಹನ್ಸಿತಾ ರೆಡ್ಡಿ ಮನೆಗಳು ಕೂಡ ಇವೆ.

‘ಸಂಕ್ರಾಂತಿಗೆ ವಸ್ತುನ್ನಾಮ್’​ ಚಿತ್ರದ ನಿರ್ದೇಶಕ ಅನಿಲ್ ರಾವಿಪುಡಿ ಕಚೇರಿ ಮೇಲೂ ಐಟಿ ಇಲಾಖೆ ಪರಿಶೀಲನೆ ನಡೆಸಿದೆ. ಈ ದಾಳಿ ಹಿಂದಿನ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಎರಡೂ ಸಂಸ್ಥೆಗಳು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುವುದರಲ್ಲಿ ಎತ್ತಿದ ಕೈ. ಈ ಸಂದರ್ಭದಲ್ಲಿ ಎಲ್ಲಾದರೂ ಅಕ್ರಮ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: ಆಸ್ಪತ್ರೆ ಶವಗಾರದಲ್ಲಿ ತಂದೆ , ಮದುವೆ ಸಂಭ್ರಮದಲ್ಲಿ ಮಗಳು : ಏನಿದು ಹೃದಯಾವಿದ್ರಾವಕ ಘಟನೆ

ದಿಲ್​ರಾಜು ನಿರ್ಮಾಣದ ‘ಗೇಮ್​ ಚೇಂಜರ್’ ಸಿನಿಮಾ ಇತ್ತೀಚೆಗೆ ಬಾಕ್ಸ್​​ ಆಫೀಸ್​ನಲ್ಲಿ ಮಾಕಾಡೆ ಮಲಗಿತ್ತು. ಸುಮಾರು 450 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಹೆಚ್ಚು ಸದ್ದು ಮಾಡುವಲ್ಲಿ ವಿಫಲವಾಗಿತ್ತು. ಇದರ ನಡುವೆಯೂ ‘ಸಂಕ್ರಾಂತಿ ವಸ್ತುನ್ನಾಮ್’​ ಸಿನಿಮಾ ಸೂಪರ್​ ಡೂಪರ್​ ಹಿಟ್​ ಆಗುವಲ್ಲಿ ಯಶಸ್ವಿಯಾಗಿತ್ತು.

ಮೈತ್ರೀ ಮೂವಿ ಮೇಕರ್ಸ ಮೇಲೆಯೂ ಐಟಿ ದಾಳಿ !

‘ಪುಷ್ಪ 2’ ಚಿತ್ರ ನಿರ್ಮಾಣ ಸಂಸ್ಥೆ ಮೇಲೂ ಐಟಿ ಅಧಿಕಾರಿಗಳ ದಾಳಿ ಮಾಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್​ ನವೀನ್​, ಸಿಇಒ ಚರ್ರಿ ಕಚೇರಿ ಹಾಗೂ ಆಪ್ತರ ಕಚೇರಿಗಳಲ್ಲೂ ಐಟಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ಆಗಿದೆ.

ಅಲ್ಲು ಅರ್ಜುನ್​ ನಟನೆಯ, ನಿರ್ಮಾಪಕ ನವೀನ್​ ನಿರ್ಮಾಣದ ಪುಷ್ಪ 2 ಸಿನಿಮಾ 2024ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಇದರ ನಡುವೆ ಈ ಐಟಿ ದಾಳಿ ಕುತೂಹಲ ಕೆರಳಿಸಿದೆ.

 

Exit mobile version