Site icon PowerTV

ದಿನಗೂಲಿ ಕೆಲಸಗಾರರ ಮೇಲೆ ದೌರ್ಜನ್ಯ : ಮುನಿರತ್ನ ಮೇಲೆ FIR ದಾಖಲು !

ಬೆಂಗಳೂರು : ಏಡ್ಸ್​ ಟ್ರಾಪ್​ ಶಾಸಕ ಮುನಿರತ್ನ ವಿರುದ್ದ ಮತ್ತೊಂದು ಎಫ್​ಐಆರ್​​ ದಾಖಲಾಗಿದ್ದು. ದಿನಗೂಲಿ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ಈ ಆರ್​ಎಂಸಿ ಯಾರ್ಡ್​ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ನಿನ್ನೆ ಪೀಣ್ಯ ಪ್ರಥಮ ದರ್ಜೆ ಕಾಲೇಜು ಬಳಿಯಿರುವ ಅಕ್ಕಮಹಾದೇವಿ ಸ್ಲಂ ನಲ್ಲಿ ದಿನಗೂಲಿ ಕಾರ್ಮಿಕರು ವಾಸಿಸುತ್ತಿದ್ದ ಮನೆಗಳನ್ನು ನೆಲಸಮ ಮಾಡಲಾಗಿತ್ತು. ಸುಮಾರು 50ಕ್ಕು ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದ ಸ್ಲಂಗೆ ಬಂದ ಶಾಸಕ ಮುನಿರತ್ನ ಮತ್ತು ಸಹಚರರು ಏಕಾಏಕಿ ಅಲ್ಲಿದ್ದ ಎಲ್ಲರ ಮನೆಗಳನ್ನು ನೆಲಸಮ ಮಾಡಿದ್ದರು.

ಇದನ್ನೂ ಓದಿ : ಖ್ಯಾತ ನಿರ್ಮಾಪಕ ದಿಲ್​ರಾಜು ಮತ್ತು ಪುಷ್ಪ ಸಿನಿಮಾ ನಿರ್ದೇಶಕರ ಮನೆ ಮೇಲೆ ಐಟಿ ದಾಳಿ !

ಇದೀಗ ಇದರ ಕುರಿತು ಸಂತ್ರಸ್ಥರು ಪೊಲಿಸ್​ ಠಾಣೆ ಮೆಟ್ಟಿಲೇರಿದ್ದು. ಮುನಿರತ್ನ ಮತ್ತು ಸಹಚರರು ಏಕಾಏಕಿ ಬಂದು ಎಲ್ಲರ ಮನೆಗಳನ್ನು ನೆಲಸಮ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ. ವಸಂತ್ ಕುಮಾರ್, ಚನ್ನಕೇಶವ, ನವೀನ್, ರಾಮ , ಕಿಟ್ಟಿ , ಗಂಗಾ ಎಂಬುವವರು ಬಂದು ಮನೆ ನೆಲಸಮ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.

ಪ್ರತಿ ಮನೆಯಲ್ಲಿ ಕೂಡಿಟ್ಟಿದ್ದ 20 ರಿಂದ 70 ಸಾವಿರ ಹಣ ಮತ್ತು 30ಗ್ರಾಂ ಚಿನ್ನಾಭರಣ ಮಣ್ಣು ಪಾಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶಾಸಕ ಮುನಿರತ್ನ ತನ್ನ ಪ್ರಭಾವ ಬಳಸಿ ಕೂಲಿ ಕಾರ್ಮಿಕರ ಮೇಲೆ ದರ್ಪ ತೋರಿಸಿದ್ದಾರೆ ಎಂದು RMC ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

Exit mobile version