Site icon PowerTV

‘ಪೋಲಿಸಪ್ಪ ಡೌರಿ ಬೇಕೇನಪ್ಪ’ : ಪೊಲೀಸ್​ ಪತಿಯ ಮೇಲೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ ಪತ್ನಿ !

ಚಿಕ್ಕಮಗಳೂರು : ಪತ್ನಿಯೊಬ್ಬಳು ತನ್ನ ಸ್ವಂತ ಪತಿಯ ವಿರುದ್ದ ವರದಕ್ಷಿಣೆ ಪ್ರಕರಣ ದಾಖಲಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದ್ದು. ನ್ಯಾಯ ಕಾಯುವ ಪೊಲೀಸಪ್ಪನೆ ತನ್ನ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಮಾಡಲಾಗಿದೆ.

ಚಿಕ್ಕಮಗಳೂರಿನ ಕಳಸಾ PSI ನಿತ್ಯಾನಂದಗೌಡನ ವಿರುದ್ದ ಆತನ ಪತ್ನಿ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ. ನಿತ್ಯಾನಂದಗೌಡನ ಪತ್ನಿ ಅಮಿತಾರಿಂದ ತನ್ನ ಗಂಡ 50 ಲಕ್ಷದ ವರದಕ್ಷಿಣೆ ನೀಡಲು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದು. ಜೊತೆಗೆ ಪತ್ನಿಯ ತಂಗಿ, ತಂಗಿ ಗಂಡನಿಂದಲೂ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಎಟಿಎಂಗೆ ಹಣ ತುಂಬಿಸದೆ ವಂಚನೆ : ಕದ್ದ ಹಣದಲ್ಲಿ ಯುವತಿಯೊಂದಿಗೆ ಚಿನ್ನ ಖರೀದಿ !

ಜೊತೆಗೆ ಪಿಎಸ್​ಐ ನಿತ್ಯಾನಂದಗೌಡ ಕೆಲಸ ಮಾಡುವ ಸ್ಥಳಗಳಲ್ಲಿಯೂ ಆತನ ಬಗ್ಗೆ ಕೆಟ್ಟ ಆರೋಪಗಳಿವೆ ಎಂದು ತಿಳಿದು ಬಂದಿದ್ದು. ಕಷ್ಟ ಅಂತ ಬರುವ ಮಹಿಳೆಯರನ್ನು ಮತ್ತು ಪಾಸ್​ಪೋರ್ಟ್​ಗೆ ಬರುವ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಾನೆ ಎಂದು ಆರೋಪಿಸಲಾಗಿದೆ. ಜೊತೆಗೆ ಉಡುಪಿಯ ಕಾಪು ಠಾಣೆಯಲ್ಲಿದ್ದಾಗ ಸೀಮಾ ಎಂಬ ಮುಸ್ಲಿಂ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ, ನಾನು ಆತನ ರೂಂಗೆ ಹೋದಾಗ ಕಾಂಡೋಮ್ ಗಳು ಪತ್ತೆಯಾಗಿದ್ದವು.

ಈ ವಿಷಯ ತಿಳಿದ ಅಲ್ಲಿಯ ಮುಸ್ಲೀಂ ಯುವಕರು ನಿತ್ಯಾನಂದಗೌಡನಿಗೆ ಹೊಡೆಯಲು ಬಂದಾಗ ಅಲ್ಲಿಯ ಎಸ್ಪಿ ಆತನನ್ನು ಉಳಿಸಿದ್ದರು. ಬೆಂಗಳೂರಿನಲ್ಲೂ ಸುಮಿತ್ರ ಎಂಬ ಮಹಿಳೆಯನ್ನು ಮಂಚಕ್ಕೆ ಕರೆದು ಸಿಕ್ಕಿಬಿದ್ದು ನಂತರ ನಾಲ್ಕು ಲಕ್ಷ ಹಣವನ್ನು ನೀಡಿ ಬಚಾವಾಗಿದ್ದನು ಎಂದು ಮಹಿಳೆ ತನ್ನ ಪತಿ ಕಾಮ ಪುರಾಣವನ್ನು ಎಫ್​ಐಆರ್​ ನಲ್ಲಿ ದಾಖಲಿಸಿದ್ದಾರೆ.

Exit mobile version