Site icon PowerTV

ಹೆಂಡತಿಯ ಅಕ್ರಮ ಸಂಬಂಧಕ್ಕೆ ಬಿತ್ತು ಗಂಡನ ಹೆಣ !

ಹಾಸನ: ಮಾರಕಾಸ್ತ್ರಗಳಿಂದ ವ್ಯಕ್ತಿಯೊಬ್ಬನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದ್ದು. ಮೃತನನ್ನು ಲೋಕೆಶ್​( ನಂಜುಂಡೇಗೌಡ) ಎಂದು ಗುರುತಿಸಲಾಗಿದೆ. ಇದೀಗ ಮೃತನ ಕುಟುಂಬಸ್ಥರು ಲೋಕೆಶ್​​ ಸಾಯಲು ಹೆಂಡತಿಯ ಅಕ್ರಮ ಸಂಬಂಧವೆ ಕಾರಣ ಎಂದು ಆರೋಪಿಸಿದ್ದಾರೆ.

ಹೌದು..ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಬಾಗೂರು ಹೋಬಳಿಯ ಕುಂಬಾರಹಳ್ಳಿ ಗ್ರಾಮದವನಾದ ಲೋಕೆಶ್​ ಪ್ರತಿನಿತ್ಯ ತನ್ನ ಊರಿನ ಗ್ರಾಮದ ರೈತರಿಂದ ಹಾಲನ್ನು ಖರೀದಿಸಿ ಖಾಸಗಿ ಡೈರಿಗೆ ಮಾರಾಟ ಮಾಡುತ್ತಿರುತ್ತಾರೆ. ನೆನ್ನೆ ಸಂಜೆ ಕೂಡ ರೈತರಿಂದ ಹಾಲು ಖರೀದಿಸಿ ಮರುವನಹಳ್ಳಿಯಿಂದ ಬ್ಯಾಡರಹಳ್ಳಿ ಕಡೆಗೆ ಹೋಗುತ್ತಿದ್ದ, ಈ ವೇಳೆ ಮಾರ್ಗ ಮಧ್ಯೆ ಯಾರೋ ನನ್ನ ಆಟೋ ಪಂಕ್ಚರ್ ಆಗಲಿ ಎಂದು ಕಬ್ಬಿಣದ ಮೊಳೆಗಳನ್ನ ರೋಡಿಗೆ ಅಡ್ಡಲಾಗಿ ಎಸೆದು ಪಂಕ್ಚರ್ ಆಗುವಂತೆ ಮಾಡಿದ್ದಾರೆ.

ಇದನ್ನೂ ಓದಿ: ದೆಹಲಿ ಚುನಾವಣೆಗೆ ಬಿಜೆಪಿಯಿಂದ ಭರ್ಜರಿ ಗ್ಯಾರಂಟಿಗಳ ಘೋಷಣೆ : ಮಹಿಳೆಯರಿಗೆ 2,500ರೂ ಹಣ !

ಇದರಿಂದ ಗಾಬರಿಗೊಂಡ ಲೋಕೇಶ್ ತನ್ನ ಊರಿನ ಸ್ನೇಹಿತ ತಮ್ಮಯ್ಯ ಎಂಬುವನಿಗೆ ಕರೆ ಮಾಡಿ ಬೇಗ ಸ್ಥಳಕ್ಕೆ ಬರುವಂತೆ ಹೇಳಿದ್ದಾನೆ. ತಮ್ಮಯ್ಯ ಲೋಕೇಶನ ಭಾವ ಸುರೇಶ್ ಮತ್ತು ಇನ್ನಿಬ್ಬರನ್ನು ಕರೆದುಕೊಂಡು ಸ್ಥಳಕ್ಕೆ ಬಂದಿದ್ದಾನೆ ಲೋಕೇಶನ ಆಟೋ ಇದ್ದ ಜಾಗಕ್ಕೆ ಬಂದು ನೋಡೋವಷ್ಟರಲ್ಲಿ ಯಾರೋ ದುಷ್ಕರ್ಮಿಗಳು ಲೋಕೇಶನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಕೂಡಲೇ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ಮಾಡಿ ಮೃತದೇಹವನ್ನ ಹಾಸನದ ಹಿಮ್ಸ್ ಗೆ ಮರಣೋತ್ತರ ಪರೀಕ್ಷೆ ನಡೆಸಲು ಕಳಿಸಿದ್ದಾರೆ. ನಂತರ ಠಾಣೆಗೆ ಬಂದ ಲೋಕೇಶ್ ಸಂಬಂಧಿಕರು ಘಟನೆ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು ಅಘಾತಕಾರಿ ಅಂಶವನ್ನ ಎಫ್‌ಐಆರ್ ನಲ್ಲಿ ನಮೂದಿಸಿದ್ದಾರೆ.

ಅಕ್ರಮ ಸಂಬಂಧದ ಶಂಕೆ !

ಕೊಲೆಯಾದ ಲೋಕೇಶ್‌ನ ಹೆಂಡಿತಿ ಸವಿತಾಳ ಜೊತೆ ಅರುಣ್ ಎಂಬಾತ ಅಕ್ರಮ ಸಂಬಂಧ ಹೊಂದಿದ್ದ, ಆತನೇ ಸವಿತಾಳಿಗಾಗಿ ಯಾರ ಜೊತೆಯೋ ಸೇರಿಕೊಂಡು ಕೊಲೆ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ. ಈ ಹಿಂದೆಯೂ ಈ ರೀತಿ ಲೋಕೇಶ್ ಮೇಲೆ ಅಟ್ಯಾಕ್ ಆಗಿತ್ತು ಈಗಲು ಅವರೇ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಈ ದೂರಿನ ಹಿನ್ನಲೆ ಲೋಕೇಶ್ ಹೆಂಡತಿ ಸವಿತಾಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದು ಆರೋಪ ಮಾಡಿರುವ ಅರುಣ್ ಕಣ್ಮರೆಯಾಗಿದ್ದಾನೆ. ಇದರಿಂದ ಅರುಣ್ ತಲೆತಪ್ಪಿಸಿಕೊಂಡಿರುವುದು ಈತನೆ ಅಕ್ರಮ ಸಂಬಂಧಕ್ಕಾಗಿ ಕೊಲೆ ಮಾಡಿರಬಹುದು ಎಂಬ ಅನುಮಾನ ದೃಢವಾಗುತ್ತಿದೆ.

ಒಟ್ಟಾರೆ ತನ್ನ ಪಾಡಿಗೆ ತಾನು ಸಂಪಾದನೆ ಮಾಡಿಕೊಂಡು ಜೀವನ ಮಾಡಿಕೊಂಡಿದ್ದ ಲೋಕೇಶ್ ದಾರಿ ಮಧ್ಯೆ ಭೀಕರ ಕೊಲೆಯಾಗಿದ್ದರೆ. ಈತನ ಸಾವಿಗೆ ಆತನ ಹೆಂಡತಿ ಇಟ್ಟುಕೊಂಡಿದ್ದ ಅಕ್ರಮ ಸಂಬಂಧವೇ ಕಾರಣ ಎಂದು ದಂಬಂಧಿಕರು ದೂರುತ್ತಿದ್ದು. ಪೊಲೀಸರ ತನಿಖೆ ನಂತರ ಯಾರ್ಯಾರು ಲೋಕೇಶ್ ಕೊಲೆ ಮಾಡಿದ್ದಾರೆ ಎಂಬ ಸತ್ಯ ಹೊರ ಬೀಳಬೇಕಿದೆ.

Exit mobile version