Site icon PowerTV

ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪರಿಗೆ ಗೌರವ ಡಾಕ್ಟರೇಟ್ ಘೋಷಣೆ !

ಶಿವಮೊಗ್ಗ: ಮಾಜಿ ಸಭಾಪತಿ ಹಾಗೂ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪನವರಿಗೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಶಿವಮೊಗ್ಗ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ.

ಕಾಗೋಡು ತಿಮ್ಮಪ್ಪನವರು ಹೋರಾಟ, ಶೋಷಿತರ ಪರ ಧ್ವನಿ, ನೇರ ಮಾತುಗಾರ, ಪ್ರತಿ ಪಕ್ಷದವರು ಇಷ್ಟಪಡುವಂತಹ ನಾಯಕ, ಗೇಣಿ ರೈತರ ಸಮಸ್ಯೆ ಹೋರಾಟ, ಸಮಾಜವಾದಿ ರೈತ ಪರ ಹೋರಾಟಕ್ಕಾಗಿ, ಹಳ್ಳಿ ಹಳ್ಳಿಗೂ ಸೈಕಲ್ ನಿಂದ ಪ್ರವಾಸ ಮಾಡಿ, ಜನರನ್ನು ಜಾಗೃತಗೊಳಿಸಿದವರಾಗಿದ್ದು, ಮಲೆನಾಡು ಭಾಗದ ಕಾಗೋಡು ಸತ್ಯಾಗ್ರಹದ ಮೂಲಕ ಮನೆ ಮಾತಾಗಿದ್ದಾರೆ.

ಇದನ್ನೂ ಓದಿ: ಯಕ್ಷಗಾನಕ್ಕೆ ನಟಿ ಉಮಾಶ್ರೀ ಎಂಟ್ರಿ : ಮಂಥರೆಯಾಗಿ ಪಾದಾರ್ಪಣೆ !

ಉಳುವವನೇ ಹೊಲದೊಡೆಯ ಎಂಬ ತತ್ವ ಇಟ್ಟುಕೊಂಡು, ಹಿಂದುಳಿದ ವರ್ಗದ ರೈತರ ಜನಸಾಮಾನ್ಯರ ಪರ ಗಟ್ಟಿ ಧ್ವನಿಯಾಗಿ, ಆ ಸಮಯದಲ್ಲಿ ಅನೇಕ ಗೇಣಿದಾರರಿಗೆ, ಭೂಮಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿದೆ. ಇದು ಅವರ ಅಭಿಮಾನಿಗಳು ಹಾಗೂ ಮಲೆನಾಡಿಗರ ಸಂತಸಕ್ಕೆ ಕಾರಣವಾಗಿದೆ.

Exit mobile version