Site icon PowerTV

ಯಕ್ಷಗಾನಕ್ಕೆ ನಟಿ ಉಮಾಶ್ರೀ ಎಂಟ್ರಿ : ಮಂಥರೆಯಾಗಿ ಪಾದಾರ್ಪಣೆ !

ಹೊನ್ನಾವರ: ಕನ್ನಡ ಚಲನಚಿತ್ರ ರಂಗದ ಪ್ರಸಿದ್ಧ ನಟಿ ಹಾಗೂ ಮಾಜಿ ಸಚಿವರಾದ ಉಮಾಶ್ರೀ ಈಗ ಯಕ್ಷಗಾನ ಲೋಕಕ್ಕೆ ಪ್ರವೇಶಿಸುತ್ತಿದ್ದಾರೆ. ಉಮಾಶ್ರೀ ಯಕ್ಷಗಾನದ ಅತ್ಯಂತ ಸವಾಲಿನ ಪಾತ್ರವಾಗಿ ಪರಿಗಣಿಸಲ್ಪಡುವ ಮಂಥರೆಯ ಪಾತ್ರದಲ್ಲಿ ಮೊದಲ ಬಾರಿಗೆ ಯಕ್ಷರಂಗಭೂಮಿಗೆ ಕಾಲಿಡುವ ಮೂಲಕ ಚಂಡೆಯ ಹೊಡೆತಕ್ಕೆ ಹೆಜ್ಜೆ ಹಾಕಲಿದ್ದಾರೆ.

ಜನವರಿ 17ರಂದು, ಉಮಾಶ್ರೀ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಸೈಂಟ್ ಆಂಟನಿ ಮೈದಾನದಲ್ಲಿ ಪೆರ್ಡೂರು ಶ್ರೀಅನಂತಪದ್ಮನಾಭ ಯಕ್ಷಗಾನ ಮಂಡಳಿಯಿಂದ ಆಯೋಜಿಸಲಾಗಿರುವ ಶ್ರೀರಾಮರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಮಂಥರೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮವನ್ನು ಅಪ್ಪಿ ಹೆಗ್ಡೆ ಸಣ್ಮನೆಯವರು ಆಯೋಜಿಸಿದ್ದು, ಉಮಾಶ್ರೀ ಅವರನ್ನು ಸುಮಾರು ಒಂದು ತಿಂಗಳ ಹಿಂದೆ ಸಂಪರ್ಕಿಸಿದ್ದರು.

ಇದನ್ನೂ ಓದಿ : ರಾಜಧಾನಿಯ ಪ್ರತಿಷ್ಟಿತ ಕಾಲೇಜು ಯುವಕ-ಯುವತಿಯರಿಂದ ಡ್ರಗ್ಸ್​ ಪಾರ್ಟಿ !

ಯಕ್ಷಗಾನದಲ್ಲಿ ಪಾತ್ರವಹಿಸುತ್ತಿರುವುದನ್ನು ಉಮಾಶ್ರೀ ದೃಢಪಡಿಸಿದ್ದು, ಜನವರಿ 12 ಮತ್ತು 13ರಂದು ಯಕ್ಷಗಾನದ ವೇಷಾಭರಣಗಳ ತರಬೇತಿಯನ್ನು ಪಡೆದುಕೊಂಡಿದ್ದಾರೆ. ನಟನೆಗಾಗಿ, ಉಮಾಶ್ರೀ ಗುರುವಾರ ರಾತ್ರಿ ಬೆಂಗಳೂರಿನಿಂದ ಹೊನ್ನಾವರಕ್ಕೆ ಪ್ರಯಾಣಿಸಿದ್ದಾರೆ.

Exit mobile version