Site icon PowerTV

ಕೆಂಪೇಗೌಡ ಏಪೋರ್ಟ್​ನಲ್ಲಿ 23 ಕೋಟಿ ಮೌಲ್ಯದ ಗಾಂಜಾ ಸೀಜ್​ !

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಿನದಲ್ಲಿ ಲಕ್ಷಾಂತರ ದೇಶಿ ಮತ್ತು ವಿದೇಶಿ ಪ್ರಯಾಣಿಕರು ಸಂಚಾರ ಮಾಡ್ತಾರೆ. ಪ್ರಯಾಣಿಕರ ಜೊತೆ ಜೊತೆಗೆ ಕೆಲ ಖತರ್ನಾಕ್​ಗಳು ಬೆಂಗಳೂರಿಗೆ ಕೋಟ್ಯಂತರ ಮೌಲ್ಯದ ಮಾದಕ ವಸ್ತುಗಳನ್ನು ಪ್ರವೇಶ ಮಾಡ್ತಾ ಇದ್ದಾರೆ. ಹೀಗೆ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಗಾಂಜಾ ಸಾಗಣೆ ಮಾಡಲು ಪ್ರಯತ್ನ ಪಟ್ಟವರನ್ನ ಬಂಧಿಸಲಾಗಿದೆ.

ಹೌದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಿನ ಒಂದಕ್ಕೆ ಲಕ್ಷಾಂತರ ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ಈ ನಡುವೆ ಕೆಲ ಖತರ್ನಾಕ್ ಗಳು ಫೀಲಂ ಸ್ಟೈಲ್ ನಲ್ಲಿ ಮಾದಕ ವಸ್ತುಗಳನ್ನು ಸಾಗಣಿ ಮಾಡುತ್ತಾರೆ. ಈ ಬಾರಿಯು ಬ್ಯಾಂಕಾಕ್ ನಿಂದ ಬೆಂಗಳೂರಿಗೆ ಬಂದಂತಹ ಮೂವರು ಪ್ರಯಾಣಿಕರು 23 ಕೆ.ಜಿ ತೂಕದ 23 ಕೋಟಿ ಮೌಲ್ಯದ ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಸಾಗಣಿ ಮಾಡಲು ಪ್ರಯತ್ನ ಪಟ್ಟಿದ್ದಾರೆ. ಖಚಿತ ಮಾಹಿತಿ ಮೇರೆಗೆ SIIB, AP &ACC ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ವಸ್ತುಗಳನ್ನು ಸಾಗಣೆ ಮಾಡಲು ಪ್ರಯತ್ನ ಪಟ್ಟವರನ್ನ ವಶ ಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹಿಂಡನ್​ಬರ್ಗ್​ ಸಂಸ್ಥೆ ಕಾರ್ಯಚರಣೆ ಸ್ಥಗಿತ : ಅದಾನಿಯನ್ನೆ ಅಲುಗಾಡಿಸಿದವರಿಗೆ ಏನಾಯಿತು !

ಪ್ರತಿ ಬಾರಿಯೂ ಬೆಂಗಳೂರಿಗೆ ವಿವಿಧ ರೀತಿಯ ಮಾದಕ ವಸ್ತುಗಳನ್ನು ಸಾಗಣೆ ಮಾಡುವ ಅಂತರಾಷ್ಟ್ರೀಯ ಪೆಡ್ಲರ್ ಗಳು ಈ ಬಾರಿ ಹೈಡ್ರೋಫೋನಿಕ್ಸ್ ಮಾದರಿಯಲ್ಲಿ ನೀರಿನ ಮೇಲೆ ಬೆಳೆಯುವ ಗಾಂಜಾ ಬೀಜ ಮತ್ತು ಮೈರವಾನ್ ಗಾಂಜಾ ಹೂವುಗಳನ್ನು ಸಾಗಾಣಿಕೆ ಮಾಡಲು ಪ್ರಯತ್ನ ಪಟ್ಟಿದ್ದಾರೆ. ಇದನ್ನು ಭೇದಿಸಿರುವ ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು ಮೂವರನ್ನ ಬಂಧಿಸಿ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಒಟ್ಟಾರೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬ್ಯಾಂಕಾಕ್ ನಿಂದ ಬಂದ 23 ಕೋಟಿ ಮೌಲ್ಯದ ಗಾಂಜಾ ವಶಕ್ಕೆ ಪಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಆದರೆ ಬ್ಯಾಂಕಾಕ್ ವಿಮಾನ ನಿಲ್ದಾಣದಲ್ಲಿ ಇಷ್ಟೊಂದು ಪ್ರಮಾಣದ ಗಾಂಜಾ ವಸ್ತುಗಳು ತಪಸಾಣೆಯ ನಡುವೆ ಹೇಗೆ ಬಂತು ಎಂಬುದು ಯಕ್ಷ ಪ್ರಶ್ನೆಯಾಗಿದೆ.

Exit mobile version