Site icon PowerTV

ಕೇಂದ್ರ ಸಚಿವ ಸೋಮಣ್ಣಗೆ ವಿವಾಹ ಆಹ್ವಾನ ಪತ್ರಿಕೆ ನೀಡಿದ ಡಾಲಿ ಧನಂಜಯ್​ !

ಬೆಂಗಳೂರು : ನಟ, ನಿರ್ಮಾಪಕ ಡಾಲಿ ಧನಂಜಯ್​ ವಿವಾಹ ಫೆಬ್ರವರಿ 16ರಂದು ಅದ್ದೂರಿಯಾಗಿ ನೆರವೇರಲಿದ್ದು. ಮೈಸೂರಿನ ಅರಮನೆ ಆವರಣದ ಬಳಿಯಲ್ಲಿ ಮದುವೆ ನಡೆಯಲಿದೆ. ಇದರ ಪ್ರಯುಕ್ತ ಕೇಂದ್ರ ಸಚಿವ ಸೋಮಣ್ಣರ ಮನೆಗೆ ಭೇಟಿ ನೀಡಿದ ನಟ ಧನಂಜಯ್ ಮದುವೆ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿದ್ದಾರೆ.

ಕಳೆದ ಎರಡು ತಿಂಗಳಿಂದ ಮದುವೆಯ ಉತ್ಸಾಹದಲ್ಲಿ ಓಡಾಡುತ್ತಿರುವ ನಟ ಧನಂಜಯ್​ ಅನೇಕ ರಾಜಕೀಯ ಗಣ್ಯರು, ಸಿನಿಮಾ ರಂಗದ ನಟ-ನಟಿಯರಿಗೆ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿದ್ದಾರೆ. ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ, ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡಿದ್ದ ಡಾಲಿ ಧನಂಜಯ್. ಕೇಂದ್ರ ಸಚಿವ ಸೋಮಣ್ಣರ ಮನೆಗೆ ಭೇಟಿ ನೀಡಿ ಮದುವೆಯ ಆಹ್ವಾನ ಪತ್ರಿಕೆ ನೀಡಿದ್ದಾರೆ. ಇದರ ಪೋಟೋಗಳನ್ನು ಕೇಂದ್ರ ಸಚಿವ ವಿ. ಸೋಮಣ್ಣ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ :ಕೆಂಪೇಗೌಡ ಏಪೋರ್ಟ್​ನಲ್ಲಿ 23 ಕೋಟಿ ಮೌಲ್ಯದ ಗಾಂಜಾ ಸೀಜ್​ !

ಮದುವೆಯ ನಡುವೆಯೂ ಡಾಲಿ ಧನಂಜಯ್​ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡೆಗಿಸಿಕೊಂಡಿದ್ದು. ತಮ್ಮ ಹುಟ್ಟೂರಿನ ಶಾಲೆಯ ಮೂಲ ಸೌಕರ್ಯಗಳನ್ನು ಅಭಿವೃದ್ದಿ ಮಾಡಿಸುತ್ತಿದ್ದಾರೆ.

Exit mobile version