Site icon PowerTV

ನಾಳೆ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ !

ಬೆಂಗಳೂರು : ಮಹಾಲಕ್ಷ್ಮಿ ಲೇಔಟ್ ಸಬ್‌ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ, ಪೀಣ್ಯವಿಭಾಗದ ಎನ್-7 ಉಪ ವಿಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು. ಬೆಳಗ್ಗೆ 10:00 ಯಿಂದ ಮಧ್ಯಾಹ್ನ 05:00 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮಾಹಿತಿ ದೊರೆತಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು ಯಾವುವೆಂದರೆ ಮಂಜುನಾಥ್ ನಗರ, ತಿಮ್ಮಯ್ಯ ರಸ್ತೆ, ಭೋವಿ ಕಾಲೋನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್‌ಮೆಂಟ್, ಶಿವನಹಳ್ಳಿ ಪಾರ್ಕ್, ಆದರ್ಶ ನಗರ, ಆದರ್ಶ ಲೇಔಟ್, ಯುನಿಕ್ಸ್ ಕಾಲೋನಿ, ಇಂದಿರಾ ನಗರ, ಮಂಜುನಾಥ್ ನಗರ, 3ನೇ ಹಂತ 1ನೇ ಬ್ಲಾಕ್, ಬಿ-ನಗರ, ಲಕ್ಷ್ಮೀ ನಗರ, ಹೆಚ್.ವಿ.ಕೆ.ಲೇಔಟ್, ಕರ್ನಾಟಕ ಲೇಔಟ್, ಕಮಲಾ ನಗರ, ವಿ.ಜೆ.ಎಸ್.ಎಸ್.ಲೇಔಟ್, ವಾರ್ಡ್ ಕಛೇರಿ ಸುತ್ತಮುತ್ತ, ನಾಗಾಪುರ, ಮಹಾಲಕ್ಷ್ಮಿ ಪುರಂ, ಮೋದಿ ಆಸ್ಪತ್ರೆ ರಸ್ತೆ.

ಇದನ್ನೂ ಓದಿ : ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನ 2025 : ಶಾಲಾ ಸಮವಸ್ತ್ರ ಧರಿಸಿ ಬರುವ ಮಕ್ಕಳಿಗೆ ಉಚಿತ ಪ್ರವೇಶ !
ಪಂಜಾಬ್ ನ್ಯಾಷನಲ್ ಬ್ಯಾಂಕ್, ಹಂಸಲೇಖಾ ಹೋಮ್ ಸುತ್ತಮುತ್ತ, ಶಂಕರಮಠ, ಪೈಪ್ ಲೈನ್ ರಸ್ತೆ, ಜೆ.ಸಿ.ನಗರ, ಕುರಬರಳ್ಳಿ, ರಾಜಾಜಿನಗರ 2ನೇ ಬ್ಲಾಕ್, ಇಎಸ್​ಐ , ಕಮಲಾ ನಗರ ಮುಖ್ಯರಸ್ತೆ, ಗೃಹಲಕ್ಷ್ಮಿ ಲೇಔಟ್ 2ನೇ ಹಂತ, ಗೆಳೆಯರ ಬಳಗ, ಮೈಕೋ ಲೇಔಟ್, ಜಿ.ಡಿ.ನಾಯ್ಡು ಹಾಲ್, ವೆಸ್ಟ್ ಆಫ್ ಕಾರ್ಡ್ ರಸ್ತೆ,  BNES ಕಾಲೇಜು, ಟೊಯೊಟೊ ಶೋ ರೂಂ, ಎಸ್ಟೀಮ್ ಕ್ಲಾಸಿಕ್ ಅಪಾರ್ಟ್‌ಮೆಂಟ್ ಸೇರಿದಂತೆ ಹಲವೆಡೆ ವಿದ್ಯುತ್​​ ವ್ಯತ್ಯಯವಾಗಲಿದೆ ಎಂದು ಮಾಹಿತಿ ದೊರೆತಿದ್ದು. ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿಕೊಂಡಿದೆ.
Exit mobile version