Site icon PowerTV

ಗವಿಮಠದ ಜಾತ್ರೆಯಲ್ಲಿ ಜಿಲೇಬಿ ಹಾಕಿದ ಗವಿಶ್ರೀ : ಲಕ್ಷಾಂತರ ಭಕ್ತರಿಗೆ ದಾಸೋಹ ವ್ಯವಸ್ಥೆ !

ಕೊಪ್ಪಳ : ದಕ್ಷಿಣ ಭಾರತದ ಕುಂಭಮೇಳ ಎಂದೆ ಪ್ರಸಿದ್ಧಿಯಾಗಿರುವ ಗವಿಮಠದ ಜಾತ್ರಾಮಹೋತ್ಸವ ಆರಂಭವಾಗಿದ್ದು. ಜಾತ್ರೆಯಲ್ಲಿ ಬರುವ ಲಕ್ಷಾಂತರ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಇದರ ಪ್ರಯುಕ್ತ ಗವಿ ಮಠದ ಶ್ರೀಗಳು  ಅಭಿನವ ಗವಿಸಿದ್ದೇಶ್ವರರು ಜಾತ್ರೆಯಲ್ಲಿ ಜಿಲೇಬಿ ಹಾಕಿ ದಾಸೋಹ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದ್ದಾರೆ.

ಕೊಪ್ಪಳದ ಗವಿಮಠದ ಜಾತ್ರಮಹೋತ್ಸವ ಹಿನ್ನೆಲೆ,  ಇಂದು ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ನಡೆಯಲಿದೆ.  ಒಂದು ತಿಂಗಳಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಭಕ್ತರಿಗೆ ವಿಧವಿಧವಾದ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದ್ದು. ಲಕ್ಷಾಂತರ ಭಕ್ತರಿಗೆ ಒಂದು ತಿಂಗಳುಗಳ ಕಾಲ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ : ಕರುವಿನ ಮೇಲೆ ವಿಕೃತಿ : ಹೊಟ್ಟೆ ಬಗೆದ ಸ್ಥಿತಿಯಲ್ಲಿ ಸತ್ತ ಕರುವಿನ ಶವ ಪತ್ತೆ !

ಭಕ್ತರ ಪ್ರಸಾದಕ್ಕಾಗಿ ಶ್ರೀ ಮಠದಲ್ಲಿ ಲಕ್ಷಾಂತರ ಜಿಲೇಬಿ ತಯಾರಿಯನ್ನು ನಡೆಸಲಾಗಿದ್ದು. ಸಾವಯವದ ರೀತಿಯಲ್ಲಿ ಬೆಲ್ಲ-ತುಪ್ಪ ಬಳಸಿ ಜಿಲೇಬಿ ತಯಾರಿಸಲಾಗಿದೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಜನರಿಗೆ ಜಿಲೇಬಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ನೂರಾರು ಬಾಣಸಿಗರಿಂದ ದಾಸೋಹ ತಯಾರಿ ಮಾಡಲಾಗಿದ್ದು. ಜಿಲೇಬಿ, ಮಾದಲಿ, ಲಾಡು, ಸೇಂಗಾ ಹೋಳಿಗೆ, ತುಪ್ಪ, ಮಿರ್ಚಿ, ರೊಟ್ಟಿ, ಪಲ್ಲೆ ಸೇರಿದಂತೆ ವಿಧವಿಧವಾದ ಪ್ರಸಾದ ತಯಾರಿ ಮಾಡಲಾಗಿದೆ. ಹತ್ತಾರು ಕೌಂಟರ್​ ಮೂಲಕ ಪ್ರಸದ ವ್ಯವಸ್ಥೆ ಮಾಡಲಾಗಿದೆ.

ಇವೆಲ್ಲದರ ಕುರಿತು ಪರಿಶೀಲನೆ ನಡೆಸಿರುವ ಗವಿಶ್ರೀ ಸ್ವಾಮೀಜಿ, ಜಿಲೆಬಿ‌ ತಯಾರಿಕೆ ಕಾರ್ಯದಲ್ಲಿ ತೊಡಗಿರೋ ಬಾಣಸಿಗರ ಜೊತೆ ಸ್ವಾಮೀಜಿ ಮಾತುಕತೆ ನಡೆಸಿ. ಅವರೊಡನೆ ಕೂಡಿ ಜಿಲೇಬಿ ಹಾಕಿದ್ದಾರೆ.

Exit mobile version