Site icon PowerTV

ನಾಯಿಯ ಮೇಲೆ ಕಾರು ಹತ್ತಿಸಿ ವಿಕೃತಿ : ನಾಯಿಯ ನರಳಾಟ ಕಂಡು ಕಣ್ಣೀರಿಟ್ಟ ಶ್ವಾನ ಪ್ರಿಯರು !

ಬೆಂಗಳೂರು : ಯಾಕೊ ಏನೋ ಗೊತ್ತಿಲ್ಲ. ಮನುಷ್ಯರು ಮಾನವೀಯತೆಯನ್ನೇ ಮರೆತು ಮೂಕ ಪ್ರಾಣಿಗಳ ಮೇಲೆ ಕ್ರೌರ್ಯವನ್ನ ತೋರ್ತಿದ್ದಾರೆ. ತಮ್ಮ ಪಾಡಿಗೆ ತಾವು ಮಲಗಿರೊ ನಾಯಿಗಳ ಮೇಲೆ ಕಾರು ಹರಿಸಿ ಅಟ್ಟಹಾಸ ತೋರುತ್ತಿದ್ದಾರೆ. ಇದೀಗ ಇಂತಹದ್ದೆ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು. ಚಾಲಕನೋರ್ವ ಮಲಗಿರುವ ನಾಯಿಯ ಮೇಲೆ ಕಾರು ಚಲಾಯಿಸಿ ಹತ್ಯೆ ಮಾಡಿದ್ದಾನೆ.

ಇದು ಸಹಕಾರನಗರದ ಎಫ್​ ಬ್ಲಾಕ್​ನಲ್ಲಿರೊ 13 ನೇ ಅಡ್ಡರಸ್ತೆಯಲ್ಲಿ ಘಟನೆ ನಡೆದಿದ್ದು. ಜನವರಿ 4 ರಂದು ರಾತ್ರಿ 12.40 ಕ್ಕೆ ಅಮಾನವೀಯ ಘಟನೆ ಒಂದು ನಡೆದು ಹೋಗಿದೆ. ತನ್ನ ಪಾಡಿಗೆ ರಸ್ತೆಯ ಮೇಲೆ ಆಟವಾಡುತ್ತಿದ್ದ ನಾಯಿಯ ಮೇಲೆ ಥಾರ್​ ಜೀಪ್​ ಚಾಲಕ ಜೀಪ್​ ಹರಿಸಿದ್ದಾನೆ. ಈ ವೇಳೆ ತೀವ್ರವಾಗಿ ಗಾಯಗೊಂಡ ನಾಯಿ ಇಡೀ ರಾತ್ರಿ ನರಳಿ, ನರಳಿ ಪ್ರಾಣ ಬಿಟ್ಟಿದೆ. ಇದರ ಚೀರಾಟಕ್ಕೆ ಅಕ್ಕ ಪಕ್ಕದ ಮನೆಯವರು ಮರಗುವಂತಾಗಿದೆ.

ಇದನ್ನೂ ಓದಿ : ಸಿದ್ದರಾಮಯ್ಯರ ಕುರ್ಚಿಗೆ ಕಂಟಕ ಬಂದಾಗ, ಜಾತಿಗಣತಿ ನೆನಪಾಗುತ್ತೆ : ಆರ್​. ಅಶೋಕ್​ !

ಅಪಘಾತವಾಗ್ತಿದ್ದಂತೆ ಶ್ವಾನ ತೆವಳುತ್ತಾ ತೆವಳುತ್ತಾ ರಸ್ತೆ ಪಕ್ಕದಲ್ಲಿದ್ದ ಮೋರಿಯೊಳಗೆ ಸೇರಿಕೊಂಡಿದೆ. ಈ ವೇಳೆ  ಸ್ಥಳೀಯರು ರಕ್ಷಣೆಗೆ ಮುಂದಾಗಿದ್ರು. ಮೋರಿಗೆ ಸ್ಲಾಬ್ ಗಳು ಹಾಕಿ ಮುಚ್ಚಿದ್ದರಿಂದ ಶ್ವಾನದ ಹತ್ತಿರ ಹೋಗಲು ಸಾಧ್ಯವಾಗಿಲ್ಲ ಹಾಗಾಗಿ ಬೆಳಗ್ಗೆ ಎದ್ದು ಸ್ಲಾಬ್ ಗಳು ಓಪನ್ ಮಾಡಿ ನೋಡಿದಾಗ ರಕ್ತಸ್ರಾವವಾಗಿ ನಾಯಿ ಉಸಿರು ಚೆಲ್ಲಿರೊ ಕರುಣಾಜನಕ ದೃಶ್ಯ ಕಂಡಿದೆ. ಇದನ್ನ ನೆನೆದು ಶ್ವಾನ ಪ್ರಿಯರು ಕಣ್ಣೀರು ಹಾಕಿದ್ದು. ಮನುಷ್ಯನಿಗೆ ಮೂಕ‌ ಪ್ರಾಣಿಗಳ ಮೇಲೆ ಯಾಕಿ ದೌರ್ಜನ್ಯ ಎಂದು ಪ್ರಶ್ನೆ ಹಾಕಿದ್ದಾರೆ. ಅಷ್ಟೇ ಅಲ್ಲ ಈಗಲು ಅದರ ಚೀರಾಟ ಕಣ್ಣ ಮುಂದೆ ಕಟ್ಟಿದಂತಿದೆ ಎಂದು ನೋವು ತೋಡಿಕೊಂಡಿದ್ದಾರೆ. ಜೊತೆಗೆ ಅಪಘಾತ ಎಸಗಿದವರಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.

ಘಟನೆ ಬಳಿಕ ಒಂದಾದ ಶ್ವಾನ ಪ್ರಿಯರು ಕಾನೂನು ಹೋರಾಟಕ್ಕೆ ಮುಂದಾಗಿದ್ದು. ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. ಸಿಸಿಟಿವಿ ಪರಿಶೀಲಿಸಿ ಅಪಘಾತ ನಡೆಸಿದ ಕಾರು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.

 

Exit mobile version