Site icon PowerTV

ಗವಿಮಠದ ಆವರಣದಲ್ಲಿ ಗಂಡನಿಂದ ಹೆಂಡತಿಯ ಭೀಕರ ಕೊ*ಲೆ !

ಕೊಪ್ಪಳ : ಕಳೆದವಾರ ಕೊಪ್ಪಳ ಜಾತ್ರೆಯಲ್ಲಿ ವ್ಯಾಪಾರಕ್ಕಾಗಿ ಬಂದಿದ್ದ ಗಂಡ ಹೆಂಡತಿಯ ನಡುವೆ ಜಗಳವಾಗಿ ಗಂಡನೆ ತನ್ನ ಸ್ವಂತ ಹೆಂಡತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೊಪ್ಪಳದ ಗವಿಮಠದ ಆವರಣದಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ತುರವೆಕೇರೆ ಗ್ರಾಮದಿಂದ ಗೀತಾ ಮತ್ತು ರಾಜೇಶ್ ದಂಪತಿಗಳು ವ್ಯಾಪಾರಕ್ಕಾಗಿ ಕೊಪ್ಪಳದ ಗವಿಮಠಕ್ಕೆ ಬಂದಿದ್ದರು. ಜಾತ್ರೆಯಲ್ಲಿ ಸ್ಟೀಲ್​ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಕಳೆದ ಒಂದು ವಾರದಿಂದಲೂ ದಂಪತಿಗಳ ನಡುವೆ ಜಗಳವಾಗುತಿತ್ತು. ಆದರೆ ಇಂದು ಇವರಿಬ್ಬರ ನಡುವೆ ಇಂದು ಜಗಳ ವಿಕೋಪಕ್ಕೆ ತಿರುಗಿ ಗಂಡ ರಾಜೇಶ್​ ಚಾಕುವಿನಿಂದ ಹೆಂಡತಿಗೆ ಇರಿದು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ : ವೇದ ಕಲಿಯಲು ಬಂದಿದ್ದ ಬಾಲಕ ಟ್ರಕ್​ ಹರಿದು ಸಾ*ವು : ನಡುರಸ್ತೆಯಲ್ಲಿ ಛಿದ್ರವಾಯ್ತು ತಲೆ !

ಘಟನೆ ಸಂಬಂಧ ಕೊಪ್ಪಳ ನಗರ ಪೊಲೀಸ್​ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ದೊರೆತಿದೆ.

 

Exit mobile version