Site icon PowerTV

ಅಕ್ರಮ ಸಂಬಂಧದ ಆರೋಪ : ನಾಲ್ಕು ವರ್ಷದ ಮಗುವಿನೊಂದಿಗೆ ನೇಣಿಗೆ ಕೊರಳೊಡ್ಡಿದ ಮಹಿಳೆ !

ಮಂಡ್ಯ : ಅಕ್ರಮ ಸಂಬಂಧದ ಆರೋಪಕ್ಕೆ ಬೇಸತ್ತ ಗೃಹಿಣಿಯೊಬ್ಬಳು ತನ್ನ 4 ವರ್ಷದ ಮಗುವಿನೊಂದಿಗೆ ನೇಣಿಗೆ ಶರಣಾಗಿದ್ದು. ಮೃತ ಮಹಿಳೆಯನ್ನು ಶಿಲ್ಪ ಎಂದು ಗುರುತಿಸಲಾಗಿದೆ.

ಹೌದು ಇಂತಹ ಮನಕಲಕುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಕ್ಕನಹಳ್ಳಿಯ ಪುಟ್ಟರಾಜು ಎಂಬುವವರ ಜೊತೆ ವಿವಾಹವಾಗಿದ್ದ ಶಿಲ್ಪ, ಪುಟ್ಟರಾಜು ದಂಪತಿಗೆ ಗಂಡು ದೀಕ್ಷಿತ್, ಹೆಣ್ಣು ಧನುಶ್ರೀ ಎಂಬ ಮುದ್ದಾದ ಮಕ್ಕಳು ಇದ್ದರು. ಆದರೆ ಪತ್ನಿ ಶಿಲ್ಪ ಯುವಕನೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಿಲ್ಪ ಪತಿ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದನು.

ಈ ಬಗ್ಗೆ ಪತ್ನಿಗೆ ಬುದ್ದಿ ಹೇಳಿದ್ದ ಪತಿ ಪುಟ್ಟರಾಜು, ಇನ್ನು ಮುಂದೆ ಇಂತಹ ತಪ್ಪು ಮಾಡದಂತೆ ಬುದ್ದಿ ಹೇಳಿ ಮನೆಗೆ ಕರೆದುಕೊಂಡು ಬಂದಿದ್ದನು. ಮನೆಗೆ ಶಿಲ್ಪ ಗಂಡನ ಮಾತಿನಿಂದ ಪರಿವರ್ತನೆಯಾಗಿ ಸುಂದರ ಕುಟುಂಬ ಆರಂಭಿಸಲು ಚಿಂತನೆ ನಡೆಸಿದ್ದಳು.

ಇದನ್ನೂ ಓದಿ: ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ರೂ. ಗೆದ್ದ ಬಾಗಲಕೋಟೆ ಯುವಕ !

ಆದರೆ ಮಳೆ ನಿಂತರು ಮಳೆ ಹನಿ ನಿಲ್ಲುವುದಿಲ್ಲ ಎಂಬ ಗಾದೆಯಂತೆ ಶಿಲ್ಪ ಮಾಡಿದ ತಪ್ಪುಗಳನ್ನು ಅಕ್ಕಪಕ್ಕದ ಮನೆಯವರು ಪದೇ ಪದೇ ಚುಚ್ಚಿ ಮಾತನಾಡುತ್ತಿದ್ದರು. ಇದರಿಂದ ಬೇಸತ್ತ ಶಿಲ್ಪ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. 4 ವರ್ಷದ ದೀಕ್ಷಿತ್ ಎಂಬ ಮಗ ಹಾಗೂ ಎರಡು ವರ್ಷದ ಧನುಶ್ರೀ ಎಂಬ ಮಗಳು ನೇಣಿಗೆ ಶರಣಾಗಲು ಮುಂದಾಗಿದ್ದಾಳೆ ಆದರೆ ಧನುಶ್ರೀ ಎಂಬ ಹೆಣ್ಣು ಮಗಳ ಹಣೆಬರಹ ಗಟ್ಟಿ ಅನ್ಸುತ್ತೆ ಕುಣಿಕೆ ಹಾಕುವ ಸಂದರ್ಭದಲ್ಲಿ ಅದೃಷ್ಟ ವಶ ಹೆಣ್ಣು ಮಗು ಹಗ್ಗ ಜಾರಿ ಕೆಳಗೆ ಬಿದ್ದರೆ…! ಬದುಕಿ ಬಾಳಿ ಕುಟುಂಬಕ್ಕೆ ಆಧಾರವಾಗಬೇಕಿದ್ದ ಗಂಡು ಮಗು ದಿಕ್ಷಿತ್ ಕ್ರೂರಿ ಅಮ್ಮನ ಕುಣಿಕೆಗೆ ಶರಣಾಗಿ ಯಮನ ಪಾದ ಸೇರಿದೆ.

ಇತ್ತ ಶಿಲ್ಪಾ ಕುಟುಂಬಸ್ಥರು ಇದು ಕೊಲೆ ಎಂದು ಆರೋಪಿಸುತ್ತಿದ್ದಾರೆ ಆದರೆ ಇದು ಕೊಲೆಯೊ ಅಥವಾ ಆತ್ಮಹತ್ಯೆಯ್ಯೋ ತಿಳಿಯಬೇಕಾದರೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ರ ತನಿಕೆಯಿಂದ ಹೊರ ಬರಬೇಕಿದೆ. ಆದರೆ ಏನೇ ಆಗಲಿ ಪ್ರಪಂಚದ ಅರಿವಾಗುವ ಮುಂಚೆ ಏನು ತಿಳಿಯದ ಪುಟ್ಟ ಕಂದಮ್ಮ ದೀಕ್ಷಿತ್ ಪರಲೋಕಕ್ಕೆ ಸೇರಿರುವುದು ಪರ ಲೋಕವು ಮೆಚ್ಚುವುದಿಲ್ಲ ಎನಿಸುತ್ತೆ.

Exit mobile version