Site icon PowerTV

‘ಅಭಿನೇತ್ರಿಯ’ ಕ್ಷಮೆ ಕೇಳದಿದ್ದರೆ ನಿನ್ನ ಹಾಗೂ ನಿನ್ನ ಮಗನ ಪ್ರಾ*ಣ ತೆಗೆಯುತ್ತೇವೆ : ಸಿ.ಟಿ ರವಿಗೆ ಬೆದರಿಕೆ ಪತ್ರ

ಚಿಕ್ಕಮಗಳೂರು : ಮಾಜಿ ಸಚಿವ, ಮತ್ತು ವಿಧಾನ ಪರಿಷತ್​ ಸದಸ್ಯ ಸಿ,ಟಿ ರವಿಗೆ ಅನಾಮಧೇಯ ಪತ್ರವೊಂದು ಬಂದಿದ್ದು. ಈ ಪತ್ರದಲ್ಲಿ ಅಭಿನೇತ್ರಿಗೆ ಕ್ಷಮೆ ಕೇಳು, ಇಲ್ಲದಿದ್ದರೆ ನಿನ್ನ ಹಾಗೂ ನಿನ್ನ ಮಗನ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಲಾಗಿದೆ.

ಹೌದು.. ವಿಧಾನ ಪರಿಷತ್​ ಸದಸ್ಯ ಸಿ,ಟಿ ರವಿಗೆ ಬೆದರಿಕೆ ಪತ್ರ ಬಂದಿದ್ದು. ಈ ಪತ್ರದಲ್ಲಿ ಸಿ,ಟಿ ರವಿಗೆ ಬೆದರಿಕೆ ಹಾಕಲಾಗಿದೆ. ‘ಇನ್ನು 15 ದಿನದ ಒಳಗೆ ಅಭಿನೇತ್ರಿಯ ಕ್ಷಮೆ ಕೇಳಬೇಕು, ಚಿಕ್ಕಮಗಳೂರಿನಿಂದ ಬೆಳಗಾವಿಗೆ ಬಂದು ಅಭಿನೇತ್ರಿಯ ಕೈಕಾಲು ಹಿಡಿದು ಕ್ಷಮೆ ಕೇಳಬೇಕು, ಇಲ್ಲದಿದ್ದರೆ ನಿಮ್ಮ ಮನೆಗೆ ನುಗ್ಗಿ ನಿಮ್ಮ ಕೈಕಾಲ ಮುರಿದು ಸಾಯಿಸುತ್ತೇವೆ, ನಿನ್ನ ಕೈ ಕಾಲು ಮುರಿಯುತ್ತೇವೆ, ಪ್ರಾಣ ತೆಗೆಯುತ್ತೇವೆ, ನಿನ್ನ ಮಗನನ್ನು ಸಾಯಿಸುತ್ತೇವೆ, ಹುಷಾರ್…ಹುಷಾರ್… ಎಂದು ಬೆದರಿಕೆ ಪತ್ರ ಬಂದಿದೆ.

ಇದನ್ನೂ ಓದಿ : ಗೆಳತಿ ಮೇಲಿನ ಸಿಟ್ಟಿಗೆ ಕೈಕೊಯ್ದುಕೊಂಡ ಯುವಕ : ಪೊಲೀಸರ ಸಮಯ ಪ್ರಜ್ಞೆಗೆ ಬದುಕಿತು ಬಡಜೀವ ! 

ಈ ಬೆದರಿಕೆ ಪತ್ರದಿಂದ ಸಿ.ಟಿ.ರವಿಗೆ ಮಾತ್ರವಲ್ಲದೆ, ಅವರ ಮಗ ಸೂರ್ಯನಿಗೂ ಬೆದರಿಕೆ ಹಾಕಿದ್ದು. ಈ ಅನಾಮಧೇಯ ಪತ್ರದ ಕುರಿತು ಸಿಟಿ ರವಿ ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಪತ್ರವನ್ನು ಬರೆದಿರುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

Exit mobile version