Site icon PowerTV

ಸೊಸೆಯಾಗಬೇಕಾದವಳನ್ನು ಮದುವೆಯಾದ ಅಪ್ಪ : ಸನ್ಯಾಸಿಯಾಗಲು ನಿರ್ಧರಿಸಿದ ಮಗ !

ನಾಶಿಕ್: ಮಗನ ಮದುವೆಯಾಗಿ ಬಂದು ಮನೆಯನ್ನು ಬೆಳಗ ಬೇಕಾಗಿದ್ದ ಸೊಸೆಯನ್ನೆ ತಂದೆಯೊಬ್ಬ ಮದುವೆಯಾಗಿದ್ದು. ಈ ವಿಷಯವನ್ನು ತಿಳಿದ ಮಗ ಸನ್ಯಾಸ ಸ್ವೀಕರಿಸಲು ಮುಂದಾಗಿದ್ದಾನೆ.

ಮಹರಾಷ್ಟ್ರದ ಸಾಸಿಕ್​ನಲ್ಲಿ ಘಟನೆ ನಡೆದಿದ್ದು. ತಾನು ಮದುವೆಯಾಗ ಬೇಕಿದ್ದ ಯುವತಿಯನ್ನು ಆತನ ತಂದೆ ಮದುವೆಯಾಗಿದ್ದಾನೆ. ಹೌದು.. ವಿವರಗಳ ಪ್ರಕಾರ, ಆ ಯುವಕ ತನ್ನ ತಂದೆಯೊಂದಿಗೆ ವಾಸ ಮಾಡುತ್ತಿದ್ದನು. ತಂದೆಯೂ ಸಹ ಮಗನಿಗೆ ಸೂಕ್ತ ಜೋಡಿಯನ್ನು ಹುಡುಕಲು ಆರಂಭಿಸಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಮದುವೆತಯು ಆಗಲಿತ್ತು. ಆದರೆ ಮಗನಿಗೆ ಎಂದು ನೋಡಿದ್ದ ಯುವತಿಯ ಮೇಲೆ ಮೋಹಗೊಂಡ ತಂದೆ, ಸೊಸೆಯಾಗಬೇಕಾದವಳನ್ನೆ ಮದುವೆಯಾಗಿದ್ದಾನೆ. ಯುವತಿಯನ್ನು ಮದುವೆ ಮಾಡಿಕೊಂಡು ಮನೆಗೆ ಕರೆತಂದಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.

ಇದನ್ನೂ ಓದಿ :ಮಹಾಕುಂಭ ಮೇಳಕ್ಕೆ ಸ್ಟೀವ್​ಜಾಬ್ಸ್​​ ಪತ್ನಿ ಆಗಮನ : ಪ್ರಯಾಗ್​ನಲ್ಲಿ ಎರಡು ವಾರ ವಾಸ್ತವ್ಯ !

ಈ ಘಟನೆ ಮಹರಾಷ್ಟ್ರದ ನಾಸಿಕ್​ನಲ್ಲಿ ನಡೆದಿದ್ದು. ತನ್ನ ಹೆಂಡತಿಯಾಗಬೇಕಿದ್ದ ಯುವತಿಯನ್ನು ತಾಯಿಯ ಸ್ಥಾನದಲ್ಲಿ ನೋಡಲಾಗದ ಯುವಕ ಸನ್ಯಾಸಿಗಯಾಗಲು ಮುಂದಾಗಿದ್ದಾನೆ. ಇದಾದ ನಂತರ ಯುವಕ ತನ್ನ ಮನೆಗೆ ಹೋಗದೆ ರಸ್ತೆಯಲ್ಲಿಯೆ ಜೀವನ ಕಳೆಯುತ್ತಿದ್ದು. ದೇವಸ್ಥಾನದಲ್ಲಿ ಸಿಗುವ ಊಟ ತಿಂದಿಕೊಂಡು ಜೀವನ ಸಾಗಿಸುತ್ತಿದ್ದಾನೆ ಎಂದು ಮಾಹಿತಿ ದೊರೆತಿದೆ.

 

Exit mobile version