Site icon PowerTV

ಅಯ್ಯಪ್ಪನ ಸನ್ನಿಧಿಯಲ್ಲಿ ಮಸೀದಿ ಕಟ್ಟಿ ವ್ಯವಸ್ಥಿತವಾಗಿ ಮೋಸ ಮಾಡುತ್ತಿದ್ದಾರೆ : ಪ್ರಮೋದ್​ ಮುತಾಲಿಕ್

ಚಿಕ್ಕೋಡಿ : ಕೇರಳದ ಅಯ್ಯಪ್ಪ ಸ್ವಾಮಿಗೆ ತೆರಳುವ ಭಕ್ತರು ವಾವರ ಸ್ವಾಮಿ ದರ್ಗಾಗೆ ತೆರಳದಂತೆ ಪ್ರಮೋದ್ ಮುತಾಲಿಕ್​ ಕರೆ ನೀಡಿದ್ದಾರೆ. ಅಯ್ಯಪ್ಪನ ಸನ್ನಿಧಿಯಲ್ಲಿ ಮಸೀದಿ ಕಟ್ಟಿ ವ್ಯವಸ್ಥಿತವಾಗಿ ಮೋಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇದರ ಬಗ್ಗೆ ಮಾತನಾಡಿರುವ ಪ್ರಮೋದ್​ ಮುತಾಲಿಕ್​ ‘ಅಯ್ಯಪ್ಪ ಮಾಲಾಧಾರಿಗಳು ಸಾವಿರಾರು ವರ್ಷಗಳಿಂದ ವ್ರತ ಪಾಲಿಸಿ ಸ್ವಾಮಿ ದರ್ಶನಕ್ಕೆ ತೆರಳುವ ಪ್ರತಿತಿ ಇದೆ. ಜಾತಿ ಬೇದ ಇಲ್ಲದೆ ದೇವರಿಗೆ ಹೋಗುವ ಜನ ಇದ್ದಾರೆ.
ಕಳೆದ ಹಲವು ವರ್ಷಗಳಿಂದ ಇಸ್ಲಾಂನವರು ವಾವರ ಸ್ವಾಮಿ ಮಸೀದಿ ಕಟ್ಟಿ ವ್ಯವಸ್ಥಿತವಾಗಿ ಮೋಸ ಮಾಡಿದ್ದಾರೆ. ವಾಮರ ಸ್ವಾಮಿ ಮಸೀದಿಗೆ ಭೇಟಿ ನೀಡಿ ಬಳಿಕ ಅಯ್ಯಪ್ಪನ ದರ್ಶನ ಪಡೆಯಬೇಕು ಎಂದು ಕಟ್ಟು ಕಥೆ ಕಟ್ಟಿದ್ದಾರೆ.

ಇದನ್ನೂ ಓದಿ : ನಡುರಸ್ತೆಯಲ್ಲೆ ಯುವತಿಯನ್ನು ಕೊಚ್ಚಿ ಕೊ*ಲೆ ಮಾಡಿದ ಯುವಕ : ನೋಡುತ್ತಾ ನಿಂತ ಜನ !

ಆದರೆ ಇದರ ಬಗ್ಗೆ ಯಾವುದೇ ಶಾಸ್ತ್ರದಲ್ಲಿ ಮಾನ್ಯತೆ ಇಲ್ಲ. ಆದರೆ ಇಸ್ಲಾಂ ಹೆಸರಿನಲ್ಲಿ ಶೋಷಣೆ ನಡೆಸುತ್ತಿದ್ದಾರೆ. ನಾವು ಎಷ್ಟೇ ಜಾಗೃತಿ ಮೂಡಿಸಿದರು ಹಲವು ಭಕ್ತರು ಈಗಲು ಅಲ್ಲಿಗೆ ಹೋಗುತ್ತಿದ್ದಾರೆ.
ಶಬರಿಮಲೆ ಸ್ಥಳವನ್ನು ಇಸ್ಲಾಮಿಕರಣ ಮಾಡಲು ನಾವೇ ಮುಂದಾಗುತ್ತಿದ್ದೇವೆ. ಯಾರು ಸಹ ವಾವರ ಸ್ವಾಮಿ ದರ್ಗಾಗೆ ತೆರಳಬಾರದು. ಸ್ವಾಮಿ ಸನ್ನಿದಾನದಲ್ಲಿ ಗೋವಿನ ತುಪ್ಪ ಹಚ್ಚುತ್ತೇವೆ. ಆದರೆ ಕೆಳಗಡೆ ಗೋ ಭಕ್ಷಕರ ದರ್ಶನ ಪಡೆದು ಹೋದರೆ ಸ್ವಾಮಿ ಮೆಚ್ಚುತ್ತಾನಾ..? ಹಾಗಾಗಿ ನೇರವಾಗಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಬೇಕು. ವಾವರ ಸ್ವಾಮಿ ದರ್ಗಾಗೆ ಯಾರು ಸಹ ಹೋಗಬಾರದು. ಎಲ್ಲಾ ಗುರು ಸ್ವಾಮೀಜಿಗಳು ಜಾಗೃತಿ ಮೂಡಿಸಬೇಕು ಎಂದುಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ ಕರೆ ನೀಡಿದರು.

Exit mobile version