Site icon PowerTV

ರಾಕಿ ಭಾಯ್ ಹುಟ್ಟುಹಬ್ಬಕ್ಕೆ ಟ್ವಿಟ್​ ಮಾಡಿ ಶುಭಕೋರಿದ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ !

ರಾಕಿಂಗ್ ಸ್ಟಾರ್ ಯಶ್‌ಗೆ ಇಂದು (ಜ.8) 39ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವಿದ್ದು. ತಮ್ಮ ನೆಚ್ಚಿನ ನಟನಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ. ಇದೀಗ ನಟನ ಬರ್ತ್‌ಡೇ ಪ್ರಯುಕ್ತ ರಿಲೀಸ್ ಆಗಿರುವ ‘ಟಾಕ್ಸಿಕ್’ ಗ್ಲಿಂಪ್ಸ್ ನೋಡಿ ಡಿವೈನ್ ಸ್ಟಾರ್ ರಿಷಬ್‌ ಶೆಟ್ಟಿ ಹಾಡಿ ಹೊಗಳಿದ್ದು. ನಟನಿಗೆ ಹುಟ್ಟು ಹಬ್ಬದ ಶುಭಾಷಯ ಕೋರಿದ್ದಾರೆ.

ಇದನ್ನೂ ಓದಿ :ಕಾರು-ಲಾರಿ ನಡುವೆ ಭೀಕರ ಅಪಘಾತ : ಇಬ್ಬರು ಸಾ*ವು, ನಾಲ್ವರಿಗೆ ಗಂಭೀರ ಗಾಯ !

ಸಾಮಾಜಿಕ ಜಾಲತಾಣದಲ್ಲಿ ಟಾಕ್ಸಿಕ್​ ಸಿನಿಮಾದ ಪೋಸ್ಟರ್​ ಶೇರ್ ಮಾಡಿ ಶುಭ ಕೋರಿರುವ ನಟ ರಿಷಬ್ ‘ಟಾಕ್ಸಿಕ್’ ಬರ್ತ್‌ಡೇ ಪೀಕ್ ಗ್ಲಿಂಪ್ಸ್ ನೋಡಿ ಬೆರಗುಗೊಳಿಸುವಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಹುಟ್ಟು ಹಬ್ಬದ ಶುಭಾಷಯಗಳು ಸರ್​ ಎಂದು ರಿಷಬ್​ ಬರೆದುಕೊಂಡಿದ್ದಾರೆ.

ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದ ನಟ ಯಶ್ !

ಈ ಬಾರಿಯ ಬರ್ತಡೆಗೂ ಮುನ್ನ ನಟ ಯಶ್​ ತಮ್ಮ ಅಭಿಮಾನಿಗಳಿಗೆ ಮನವಿಯನ್ನು ಮಾಡಿದ್ದು. ಯಾರೂ ಸಹ ನನ್ನ ಮನಸ್ಸಿಗೆ ನೋವುಂಟು ಮಾಡುವಂತೆ ಮಾಡಬೇಡಿ ಅಂತ ಹೇಳಿದ್ದರು. ಕಳೆದ ಬಾರಿ ದುರಂತ ನಡೆದ ಹಿನ್ನಲೆಯಲ್ಲಿ ಯಶ್ ಅವರು ಈ ರೀತಿಯ ಮನವಿಯೊಂದನ್ನು ಮಾಡಿದ್ದರು. ಅವರ ಅಭಿಮಾನಿಗಳು ಸಹ ಯಶ್‌ಮಾತಿಗೆ ಬೆಲೆ ಕೊಟ್ಟು ನಡೆದುಕೊಳ್ಳುತ್ತಿದ್ದಾರೆ.

Exit mobile version