Site icon PowerTV

ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯ ಬರ್ಬರ ಹ*ತ್ಯೆ : ಅಕ್ರಮ ಸಂಬಂಧದ ಶಂಕೆ !

ಹಾಸನ : ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯ ಬರ್ಬರ ಹತ್ಯೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದ್ದು. ಗದ್ದೆ ಕೆಲಸಕ್ಕೆ ತೆರಳಿದ್ದ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮೃತ ಮಹಿಳೆಯನ್ನು 35 ವರ್ಷದ ಅನಿತಾ ಎಂದು ಗುರುತಿಸಲಾಗಿದೆ.

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಇಬ್ಬಡಿ ಕೊಣ್ಣೂರು ಗ್ರಾಮದ ಬಳಿ ಘಟನೆ ನಡೆದಿದ್ದು. ನಿನ್ನೆ ಟಿಫನ್ ಬಾಕ್ಸ್‌ನಲ್ಲಿ ಊಟ ತುಂಬಿಕೊಂಡು ಗದ್ದೆ ಕೆಲಸಕ್ಕೆ ತೆರಳಿದ್ದ ಅನಿತಾ ಹೆಣವಾಗಿ  ಪತ್ತೆಯಾಗಿದ್ದಾಳೆ. ಪತ್ನಿ ಕಾಣೆಯಾಗಿದ್ದಾಳೆ ಎಂದು ಆಕೆಯ ಪತಿ ಚಂದ್ರಶೇಖರ ಪೊಲೀಸರಿಗೆ ಮಾಹಿತಿ ನೀಡಿದ್ದನು. ಆಕೆಗಾಗಿ ಹುಡುಕಾಟ ನಡೆಸಿದಾಗ ಮೃತ ಮಹಿಳೆಯ ಶವ ಹೊಳೆ ಸಾಲಿನಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ :ಭೀಕರ ನಕ್ಸಲ್​ ದಾಳಿಗೆ 9 ಯೋಧರು ಹುತಾತ್ಮ : ಸ್ಪೋಟದ ಭೀಕರತೆಗೆ ಛಿದ್ರಗೊಂಡ ಸೇನಾ ವಾಹನ !

ಅಕ್ರಮ ಸಂಬಂಧ ಆರೋಪದ ಮೇಲೆ ಪತಿಯೆ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು. ಎರಡು ವರ್ಷದ ಹಿಂದೆ ಜಮೀನು ವ್ಯಾಜ್ಯದಲ್ಲಿ ಸ್ವಂತ ಒಡಹುಟ್ಟಿದ ಅಣ್ಣ ಪತ್ನಿಯನ್ನೆ ಕೊಲೆ ಮಾಡಿರುವ ಆರೋಪ ಚಂದ್ರಶೇಖರ್​ ಮೇಲಿದೆ. ಸ್ಥಳಕ್ಕೆ ಸಕಲೇಶಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

 

Exit mobile version