Site icon PowerTV

ಮಕ್ಕಳಿಗೆ ವಿಷ ನೀಡಿ, ನೇಣಿಗೆ ಶರಣಾದ ದಂಪತಿ : ನಗರದಲ್ಲೊಂದು ಹೃದಯವಿದ್ರಾವಕ ಘಟನೆ !

ಬೆಂಗಳೂರು : ಒಂದೆ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಮಕ್ಕಳಿಗೆ ವಿಷ ನೀಡಿದ ದಂಪತಿಗಳು, ನಂತರ ತಾವೂ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ದೊರೆತಿದೆ.

ಮೃತರನ್ನು ಉತ್ತರ ಪ್ರದೇಶ ಮೂಲದವರು ಎಂದು ಗುರುತಿಸಿದ್ದು. ಬೆಂಗಳೂರನಲ್ಲಿ ಆನ್​ಲೈನ್​ ವ್ಯಾಪಾರ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಆದರೆ ಇಂದು ತಮ್ಮ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು. ಮಕ್ಕಳಿಗೆ ವಿಷ ನೀಡಿರುವ ದಂಪತಿ, ನಂತರ ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ರಾಕಿಭಾಯ್​ ಹುಟ್ಟುಹಬ್ಬಕ್ಕೆ ಸಿಗಲಿದೆ ಸಿಹಿ ಸುದ್ದಿ : ಟಾಕ್ಸಿಕ್​ ಸಿನಿಮಾ ಟೀಸರ್​ ರಿಲೀಸ್​ !

ಮೃತರನ್ನು ಅನೂಪ್​ ಮತ್ತು ಆತನ ಪತ್ನಿ ರಾಖಿ  ಹಾಗೂ ಅನುಪ್ರಿಯಾ, ಪ್ರಿಯಾನ್ಸು ಹೆಸರಿನ ಮಕ್ಕಳು  ಮೃತಪಟ್ಟಿದ್ದಾರೆ. ಸ್ಥಳಕ್ಕೆ ಸದಾಶಿವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ವ್ಯಾಪಾರದಲ್ಲಿ ನಷ್ಟ ಉಂಟಾದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ ಇದರ ಬಗ್ಗೆ ಇನ್ನಷ್ಟೆ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

Exit mobile version