Site icon PowerTV

ಜೆಡಿಎಸ್​ಗೂ ಜಿಟಿಡಿಗೂ ಗಂಡ-ಹೆಂಡತಿ ಸಂಬಂಧವಿದೆ, ನಮ್ಮ ಸಂಬಂಧ ಮುರಿಯಲ್ಲ : ಕುಮಾರಸ್ವಾಮಿ

ಮೈಸೂರು : ಜಿಡಿಎಸ್​ ಜೊತೆಗೆ ಜಿ,ಟಿ ದೇವೇಗೌಡರ ಮುನಿಸಿನ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ  ಕುಮಾರಸ್ವಾಮಿ ‘ ಜನತಾದಳಕ್ಕೂ ಜೆಟಿ ದೇವೇಗೌಡರಿಗೂ ಗಂಡ-ಹೆಂಡತಿಯ ಸಂಬಂಧವಿದೆ, ನಮ್ಮೀಬ್ಬರ ನಡುವೆ ಜಗಳ, ಮುನಿಸು ಇರುತ್ತದೆ. ಆದರೆ ಸಂಬಂಧ ಮುರಿಯುವುದಿಲ್ಲ.

ಜಿಟಿ ದೇವೇಗೌಡರು ಆಯಾ ಸಂದರ್ಭಕ್ಕೆ ಅನಿಸಿದ್ದನ್ನು ಹೇಳುತ್ತಾರೆ. ಅಷ್ಟಕ್ಕೆ ನಮ್ಮ ಅವರ ಸಂಬಂಧ ಮುಗಿಯುವುದಿಲ್ಲ. ಅವರು ಯಾವ ಪಕ್ಷಕ್ಕೂ ಹೋಗುವುದಿಲ್ಲ, ನಮ್ಮ ಜೊತೆಗೆ ಇರುತ್ತಾರೆ. ನಮ್ಮ ಪಕ್ಷದ 18 ಶಾಸಕರ ಶಕ್ತಿ ಕಾಂಗ್ರೆಸ್​ಗೆ ಗೊತ್ತಿದೆ. ಹೀಗಾಗಿ ನಮ್ಮ ಶಾಸಕರ ಮುರಿಯಲು ವಿರೋಧಿಗಳು ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.

ಪ್ರಿನ್ಸಸ್​ ರಸ್ತೆ ಸಿದ್ದರಾಮಯ್ಯರ ಹೆಸರು ಇಡುವ ವಿಚಾರವಾಗಿ ಕುಮಾರಸ್ವಾಮಿ ಮಾತು !

ಮೈಸೂರಿನ ಕೆ.ಆರ್​.ಎಸ್​ ರಸ್ತೆಗೆ ಸಿಎಂ ಹೆಸರು ಇಡುವ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ‘ ಮಹರಾಜರ ಮನೆತನಕ್ಕೆ ಸರ್ಕಾರ ಅಪಮಾನ ಮಾಡುತ್ತಿದೆ. ತಮ್ಮ ಬೆಂಬಲಿಗರನ್ನು ಛೂ ಬಿಟ್ಟು ರಸ್ತೆಗೆ ತಮ್ಮ ಹೆಸರಿಡಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯರ ಹೆಸರನ್ನು ದೇವನೂರು ಬಡಾವಣೆಯ ಕೆಸರೆ ಗ್ರಾಮಕ್ಕೆ ಇಡಲಿ. ಮೈಸೂರಿಗೆ ನನ್ನ ಅವದಿಯಲ್ಲೂ ಬಹಳ ಕೊಡುಗೆ ಕೊಟ್ಟಿದ್ದೇನೆ, ಹಾಗಂತ ನನ್ನ ಹೆಸರಿಡಿ ಎಂದು ಕೇಳಲು ಸಾಧ್ಯವಿಲ್ಲ ಎಂದು ಹೇಳಿದರು.

 

Exit mobile version